ಭಟ್ಕಳ ವಕೀಲರ ಸಂಘಕ್ಕೆ ಗಣೇಶ ದೇವಡಿಗ ಅಧ್ಯಕ್ಷ

24-BKL-1 GANESH
Published on

ಭಟ್ಕಳ: ಭಟ್ಕಳ ವಕೀಲರ ಸಂಘದ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಗಣೇಶ ಎಂ. ದೇವಡಿಗ, ಕಾರ್ಯದರ್ಶಿಯಾಗಿ ನಾಗರಾಜ ಎಸ್. ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಸಂಘದ ಉಪಾಧ್ಯಕ್ಷರಾಗಿ ಈಶ್ವರ ಎಂ. ನಾಯ್ಕ, ಸಹಕಾರ್ಯದರ್ಶಿಯಾಗಿ ಸುವರ್ಣಿತ ಎಸ್.ಎಂ. ಅವಿರೋಧವಾಗಿ ಆಯ್ಕೆಯಾದರು. ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಪಾಂಡು ಜಿ. ನಾಯ್ಕ, ಉಪಾಧ್ಯಕ್ಷ ಎಂ.ಜೆ. ನಾಯ್ಕ, ಹಿರಿಯ ವಕೀಲರುಗಳಾದ ಆರ್.ಆರ್. ಶ್ರೇಷ್ಟಿ, ಎಂ.ಎಲ್. ನಾಯ್ಕ, ಎಸ್.ಬಿ. ಬೊಮ್ಮಾಯಿ, ವಿ.ಎಫ್. ಗೋಮ್ಸ್, ಕೆ.ಎಚ್. ನಾಯ್ಕ, ಸಿ.ಎಂ. ಭಟ್ಟ, ನಾಗರಾಜ ಈ. ಎಚ್., ಶಂಕರ ಕೆ. ನಾಯ್ಕ, ಆರ್.ಐ. ನಾಯ್ಕ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net