

ಕೊಪ್ಪಳ : ಕುಷ್ಟಗಿ ಹನುಮಸಾಗರ ಪಟ್ಟಣದ ನಾಲ್ಕನೇ ವಾರ್ಡ್ ನಲ್ಲಿ ಹಿಂದು ಮುಸ್ಲಿಂ ಬಾಂಧವರು ಒಗ್ಗಟ್ಟಿನಿಂದ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಭಾವೈಕ್ಯತೆಗೆ ಸಾಕ್ಷಿಯಾಗಿದೆ.
ಕಳೆದ ಮೂರು ವರ್ಷಗಳಿಂದ ಹಿಂದು ಹಾಗೂ ಮುಸ್ಲಿಂ ಧರ್ಮದವರು ಸೇರಿಕೊಂಡು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದು, ಎರಡು ಸಮುದಾಯಗಳ ಯುವಕರು ಗಣೇಶನ ಪೂಜಾ ಕೈಂಕರ್ಯಗಳಲ್ಲಿ ಐದು ದಿನ ಬೆಳಗ್ಗೆ ಮುಂಜಾನೆ ಭಾವೈಕ್ಯತೆಯಿಂದ ಪಾಲ್ಗೊಳುವುದು ವಿಶೇಷ.
ಹಿಂದು ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿರುವ ಹನುಮಸಾಗರದಲ್ಲಿ ಎರಡು ಸಮುದಾಯದವರು ಒಗ್ಗಟ್ಟಿನಿಂದ ಅನೇಕ ಹಬ್ಬ ಹರಿದಿನಗಳಲ್ಲಿ ಸಹೋದರತ್ವ ಮನೋಭಾವದಿಂದ ಆಚರಣೆ ಮಾಡುತ್ತಾ ಬರುತ್ತಾರೆ. ನಾಲ್ಕನೇ ವಾರ್ಡ್ ನ ಹಿರಿಯರು ಹಾಗೂ ಯುವಕರು ಗಣೇಶ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡಿರುವುದು ಭಾವೈಕ್ಯಗೆ ಹಿಡಿದ ಕೈಗಣಡಿಯಾಗಿದೆ.
ಗ್ರಾಪಂ ಸದಸ್ಯರಾದ ಮಂಜುನಾಥ ಹುಲ್ಲೂರ, ಮಹ್ಮದ ರೀಯಾಜ್ ಖಾಜಿ, ಎರಡು ಸಮುದಾಯಗಳ ಹಿರಿಯರು, ಯುವಕರು ಮಕ್ಕಳು ಇದ್ದರು.