ಗಣೇಶ ಚತುರ್ಥಿ ಅರ್ಥಪೂರ್ಣವಾಗಿ ಆಚರಿಸಿ

Ganesh Chaturthi, PSI Eligara, Chadchana Police Station,
ಚಡಚಣ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಗಣೇಶ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಪಿಎಸ್‌ಐ ಮಹಾದೇವ ಯಲಿಗಾರ ಮಾತನಾಡಿದರು. ಬಾಬುಗೌಡ ಪಾಟೀಲ, ನಾಗರಾಜ ನಿರಾಳೆ, ಮಹಾದೇವ ಬನಸೋಡೆ, ಮಹಾದೇವ ಯಂಕಂಚಿ ಇತರರಿದ್ದರು.
Published on

ಚಡಚಣ: ಸ್ವಾಂತಂತ್ರೃ ಸಂದರ್ಭದಲ್ಲಿ ಭಾರತೀಯರನ್ನು ಒಗ್ಗೂಡಿಸಲು ಪ್ರಾರಂಭವಾದ ಗಣೇಶ ಚತುರ್ಥಿಯನ್ನು ಎಲ್ಲ ಯುವಕರು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಚಡಚಣ ಠಾಣೆಯ ಪಿಎಸ್‌ಐ ಮಹಾದೇವ ಯಲಿಗಾರ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಣೇಶ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಯುವಕರು ಡಿಜೆ ಸೌಂಡ್ ಸಿಸ್ಟಮಗಳ ಬೆನ್ನು ಹತ್ತದೆ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಬೇಕು. ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವುದರ ಮುಖಾಂತರ ಎಲ್ಲರಿಗೂ ಮಾದರಿಯಾಗಬೇಕು ಎಂದು ಹೇಳಿದರು.

ಎಲ್ಲ ಗಣೇಶ ಮಂಡಳಿಯವರು ಸ್ಥಳಿಯ ಆಡಳಿತ, ಪೊಲೀಸ್ ಇಲಾಖೆ, ಹೆಸ್ಕಾಂ ಇಲಾಖೆಗಳ ಸೂಚನೆಗಳನ್ನು ಪಾಲಿಸಿ ಅನುಮತಿ ಪಡೆದು ಗಣೇಶನ ಪ್ರತಿಷ್ಠಾಪನೆ ಮಾಡಬೇಕು ಎಂದು ಹೇಳಿದರು.

ಪಪಂ ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ, ನಾಗರಾಜ ನಿರಾಳೆ, ಮಹಾದೇವ ಬನಸೋಡೆ, ಮಹಾದೇವ ಯಂಕಂಚಿ, ಸಂಜೀವ ಭಂಡರಕವಟೆ, ಇಲಾಯಿ ನದಾ ಹಾಗೂ ವಿವಿಧ ಗಣೇಶ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net