ಗಣೇಶೋತ್ಸವ ಆಚರಣೆ ಸಮಾಲೋಚನಾ ಸಭೆ

mul
Published on

ಮೂಲ್ಕಿ: 50ನೇ ವರ್ಷದ ಗಣೇಶೋತ್ಸವ ಆಚರಣೆಗೆ ಗ್ರಾಮದ ಎಲ್ಲ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಕಾರ್ಯಕ್ರಮ ನೀಡಬೇಕಾಗಿದೆ ಎಂದು ಜೈ ಕೃಷ್ಣ ಸುಧಾಮ ವೆಲ್ಫೇರ್ ಫೌಂಡೇಶನ್ ಅಧ್ಯಕ್ಷ ಸುನೀಲ್ ಆಳ್ವ ಹೇಳಿದರು.

ಬಪ್ಪನಾಡು ದೇವಸ್ಥಾನದ ಜ್ಞಾನ ಮಂದಿರ ಸಭಾಂಗಣದಲ್ಲಿ ಬಪ್ಪನಾಡು ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಆ.27ರಂದು ನಡೆಯುವ 50ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಂಭ್ರಮಾಚರಣೆಯ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಗಣೇಶೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಗೌರವಾಧ್ಯಕ್ಷ ಪಟೇಲ್ ವಾಸುದೇವ ರಾವ್ ಪುನರೂರು, ಬಾಲಚಂದ್ರ ಕಾಮತ್ ಮಹೀಮ್ ಹೆಗ್ಡೆ, ಹರಿಶ್ಚಂದ್ರ ಬಪ್ಪನಾಡು, ವಾಸು ಪೂಜಾರಿ ಕೊಲಕಾಡಿ, ಶಶಿ ಅಮೀನ್ ಗೇರುಕಟ್ಟೆ ಸಲಹೆ ಸೂಚನೆಗಳನ್ನು ನೀಡಿದರು.

ಅರ್ಚಕ ಕೃಷ್ಣರಾಜ ಭಟ್, ಮೂಲ್ಕಿ ನ.ಪಂ.ಅಧ್ಯಕ್ಷ ಸತೀಶ್ ಅಂಚನ್, ಸದಸ್ಯೆ ದಯಾವತಿ ಅಂಚನ್, ಉದ್ಯಮಿ ಯದು ನಾರಾಯಣ ಶೆಟ್ಟಿ, ಸಂಜೀವ ದೇವಾಡಿಗ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net