ಮಳೆಯ ನಡುವೆಯೂ ನಡೆದ ಅದ್ದೂರಿ ಗಣೇಶೋತ್ಸವ

Ganapati
Published on

ಕಾರವಾರ: ಭಾರಿ ಮಳೆಯ ನಡುವೆ ಗಣೇಶೋತ್ಸವವನ್ನು ನಗರದಲ್ಲಿ ಶ್ರದ್ಧೆ, ಭಕ್ತಿ, ಸಂಭ್ರಮದಿAದ ಆಚರಿಸಲಾಯಿತು. ನಗರದ ಸಾವಿರಕ್ಕೂ ಅಽಕ ಮನೆಗಳಲ್ಲಿ ಬುಧವಾರ ಗಣೇಶನನ್ನು ಕರೆಸಿ ಪೂಜಿಸಲಾಯಿತು. ಗುರುವಾರ ಹೆಚ್ಚಿನ ಜನ ಮೆರವಣಿಗೆಯಲ್ಲಿ ಗಣಪತಿ ಮೂರ್ತಿಗಳನ್ನು ಕಡಲ ತೀರಕ್ಕೊಯ್ದು ವಿಸರ್ಜನೆ ಮಾಡಿದರು.

ಜಾಗಟೆ ಬಾರಿಸಿ, ಗರಿಗೆ, ಹೂವಿನ ಅಲಂಕಾರ ಮಾಡಿ, ಕಡುಬು, ಮೋದಕ ಕಜ್ಜಾಯ ನೈವೇದ್ಯ ಮಾಡಿ ಭಕ್ತರು ದೇವರಿಗೆ ಸಮರ್ಪಿಸಿ ವಿಗ್ನ ನಿವಾರಕನಲ್ಲಿ ತಮ್ಮ ಸಂಕಷ್ಟ ನಿವಾರಣೆಗೆ ಮೊರೆ ಇಟ್ಟರು. ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು. ಅಲ್ಲದೇ ನಗರದ ವಿವಿಧೆಡೆ ಸ್ಥಾಪಿಸಿರುವ ಸಾರ್ವಜನಿಕ ಗಣೇಶ ಮೂರ್ತಿಗಳು ಗಮನ ಸೆಳೆದವು. ಕಲಾವಿದರ ವಿಭಿನ್ನ ಪರಿಕಲ್ಪನೆಯಲ್ಲಿ ಮೂಡಿಬಂದ ಗಣಪತಿಗಳನ್ನು ವೀಕ್ಷಿಸಲು ಜನ ಮುಗಿಬಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net