ವಿಜೃಂಭಣೆಯಿಂದ ನೆರವೇರಿದ ಗಣೇಶ ಮೆರವಣಿಗೆ

HSD GANESHOTSAVA 08SSSSSS
Published on

ಹೊಸದುರ್ಗ:ಪಟ್ಟಣದ ವಿನಾಯಕ ರಂಗಮಂದಿರದಲ್ಲಿ ಓಂ ಗಣಪತಿ ಭಕ್ತಮಂಡಳಿ ಆಯೋಜಿಸಿದ್ದ 19ನೇ ವರ್ಷದ ಗಣೇಶ ಮೂರ್ತಿ ವಿಸರ್ಜನಾ ಮಹೋತ್ಸವದ ಗುರುವಾರ ವಿಜೃಂಭಣೆಯಿಂದ ನೆರವೇರಿತು.

ಗಣೇಶ ಚತುರ್ದಶಿ ದಿನ ಪ್ರತಿಷ್ಠಾಪಿಸಿದ್ದ ಭವ್ಯವಾದ ಮೂರ್ತಿಗೆ ಒಂದು ವಾರಗಳ ಕಾಲ ಪೂಜೆ, ಅಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಸಲಾಯಿತು. ಪ್ರತಿದಿನ ಸಂಜೆ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ವಿಸರ್ಜನಾ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಬುಧವಾರ ಗಣಪತಿ ಹೋಮ, ವಾಸ್ತು ಹೋಮ, ನವಗ್ರಹ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ನೆರವೇರಿದವು.

ವಿಸರ್ಜನೆ ದಿನ ವಿನಾಯಕ ರಂಗಮಂದಿರದಿಂದ ಆರಂಭಗೊಂಡ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಸಾಗಿಬಂತು. ರಸ್ತೆಗಳನ್ನು ತಳಿರು, ಕೇಸರಿ ತೋರಣ ಹಾಗೂ ಹೂಮಾಲೆಗಳಿಂದ ಅಲಂಕರಿಸಲಾಗಿತ್ತು. ಜನಪದ ಕಲಾತಂಡಗಳು, ಚಂಡೆ ವಾದ್ಯ ತಂಡಗಳು ಮೆರವಣಿಗೆಗೆ ಮೆರಗು ನೀಡಿದ್ದವು. ಮುರುಘರಾಜೇಂದ್ರ ಬಸ್ ನಿಲ್ದಾಣದ ಬಳಿಯ ಮಠದ ಬಾವಿಯಲ್ಲಿ ರಾತ್ರಿ ಗಣೇಶ ಮೂರ್ತಿಯ ವಿಸರ್ಜನೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net