ಗಾಂಧಿ ಅಹಿಂಸಾ ತತ್ವ ಮೆಚ್ಚಿದ ಜಗತ್ತು

nrp 2
ಹೊನ್ನೇಕೊಡಿಗೆ ಗ್ರಾಪಂ ಸಾರ್ಥಕ್ ಮನೆಯಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಹಾಗೂ ಲಾಲ್ ಬಹದೂರ್ ಶಾಸ್ತ್ರಿ ಜನ್ಮ ದಿನಾಚರಣೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಜುಬೇದಾ, ಸುನೀಲ್‌ಕುಮಾರ್, ನಿಶಾಂತ್, ಸಾರ್ಥಕ್ ಇತರರಿದ್ದರು.
Published on

ಎನ್.ಆರ್.ಪುರ: ಮಹಾತ್ಮ ಗಾಂಧಿ ಅವರ ಅಹಿಂಸಾ ತತ್ವ ಪ್ರಪಂಚವೇ ಮೆಚ್ಚಿಕೊಂಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಹೇಳಿದರು.

ಹೊನ್ನೇಕೊಡಿಗೆ ಗ್ರಾಪಂ ಸಾರ್ಥಕ್ ಎಂಬ ಕಾಂಗ್ರೆಸ್ ಕಾರ್ಯಕರ್ತನ ಮನೆಯಲ್ಲಿ ನಡೆದ ಗಾಂಧಿ ಜಯಂತಿ ಹಾಗೂ ಲಾಲ್ ಬಹದೂರ್ ಶಾಸ್ತ್ರಿ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ಅಹಿಂಸೆಯಿಂದ ಗಾಂಧಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದರೂ ಕೆಲವರು ಗೋಡ್ಸೆಯನ್ನು ವೈಭವೀಕರಿಸುತ್ತಿರುವುದು ದುರಂತ. ಗಾಂಧಿ ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲ ಧರ್ಮದವರು, ಜಾತಿಯವರನ್ನೂ ಒಗ್ಗೂಡಿಸಿಕೊಂಡು ಹೋಗಿ ಜಯಗಳಿಸಿದರು. ಗಾಂಧಿ, ಲಾಲ್ ಬಹದೂರ್ ಶಾಸ್ತ್ರಿ ಅವರ ಆದರ್ಶಗಳನ್ನು ಯುವಜನರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಕಾಂಗ್ರೆಸ್ ಮುಖಂಡರಾದ ಸಾಜು, ಇ.ಸಿ.ಜೋಯಿ, ಜುಬೇದಾ, ಬಿಳಾಲುಮನೆ ಉಪೇಂದ್ರ, ಕೆ.ಎ.ಅಬೂಬಕರ್, ಸುನೀಲ್‌ಕುಮಾರ್, ನಿಶಾಂತ್, ಸೂಸಲವಾನಿ ರಾಜೇಂದ್ರ, ದೇವಂತರಾಜ್, ಸಾರ್ಥಕ್, ಸುಬ್ಬಯ್ಯಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net