ಹೋರಾಟಕ್ಕೆ ಗಾಂಧೀಜಿ ಕೊಡುಗೆ ಅಪಾರ

LXR-1
Published on

ಲಕ್ಷ್ಮೇಶ್ವರ: ಸ್ವಾತಂತ್ರೃ ಹೋರಾಟಕ್ಕೆ ಗಾಂಧೀಜಿ ಕೊಡುಗೆ ಅಪಾರ. ಲಾಲ್‌ಬಹಾದ್ದೂರ್ ಶಾಸ್ತ್ರೀ ಅವರು ಪ್ರಧಾನ ಮಂತ್ರಿಯಾಗಿ ಪ್ರಾಮಾಣಿಕತೆ, ದಕ್ಷತೆಯಿಂದ ಕಾರ್ಯನಿರ್ವಹಿಸಿ, ದೇಶವನ್ನು ಅಭಿವೃದ್ಧಿಪಡಿಸಿದರು ಎಂದು ಉಪತಹಸೀಲ್ದಾರ್ ಪ್ರಶಾಂತ ಕಿಮಾಯಿ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗಾಂಧೀಜಿ ಮತ್ತು ಲಾಲ್‌ಬಹಾದೂರ್ ಶಾಸ್ತ್ರೀಯವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಸೋಮವಾರ ಪೂಜೆ ಸಲ್ಲಿಸಿ ಮಾತನಾಡಿದರು.

ಶಿರಸ್ತೇದಾರ್ ರೇಣುಕಾ ಹರಿಜನ ಮಾತನಾಡಿ, ಅಹಿಂಸಾ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವ ಮಹಾತ್ಮ ಗಾಂಧೀಜಿ ರಾಷ್ಟ್ರಪಿತನಾಗಿ ಎಲ್ಲರ ಮನದಲ್ಲಿ ಉಳಿದಿದ್ದಾರೆ ಎಂದರು. ಕಂದಾಯ ನಿರೀಕ್ಷಕ ಬಿ.ಎಂ. ಕಾತರಾಳ, ಸಿಬ್ಬಂದಿ ಪ್ರಶಾಂತ ಸನದಿ, ಸವಿತಾ ಕುಲಕರ್ಣಿ, ಸುಬೇದಖಾನ್ ಪಠಾಣ, ಚಂದ್ರಕಲಾ ಸಣ್ಣಪ್ಪನವರ, ತಸ್ಲಿಂ ಮುಲ್ಲಾ, ಶಬೀನಾಬೇಗಂ ನಧಾಪ್, ಮಂಜುನಾಥ ಜಾಧವ, ಫಾತಿಮಾ ಪತ್ತೇಖಾನ್, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net