ಗಮನ ಸೆಳೆದ ಗಾಂಧಿ ಭಾರತ ಯಾತ್ರೆ

CONGRESS GANDHI YATRE
ವಿಜಯಪುರ ನಗರದಲ್ಲಿ ಕಾಂಗ್ರೆಸ್‌ನಿಂದ ಗಾಂಧಿ ಭಾರತ ಯಾತ್ರೆ ನಡೆಯಿತು. ಮಲ್ಲಿಕಾರ್ಜುನ ಲೋಣಿ, ಅಬ್ದುಲ್‌ಹಮೀದ್ ಮುಶ್ರೀಫ್, ಡಿ.ಎಲ್. ಚವಾಣ್ ಮತ್ತಿತರರಿದ್ದಾರೆ.
Published on

ವಿಜಯಪುರ: ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಹಿನ್ನೆಲೆ ಬುಧವಾರ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ‘ಗಾಂಧಿ ಭಾರತ ಯಾತ್ರೆ’ ಗಮನ ಸೆಳೆಯಿತು.

ನಗರದ ನಾಲ್ಕು ದಿಕ್ಕಿನಿಂದಲೂ ವಿವಿಧ ನಾಯಕರುಗಳ ನೇತೃತ್ವದಲ್ಲಿ ಯಾತ್ರೆಗೆ ಚಾಲನೆ ನೀಡಲಾಯಿತು. ಅಬ್ದುಲ್‌ರಜಾಕ್ ಹೊರ್ತಿ ನೇತೃತ್ವದಲ್ಲಿ ಬಬಲೇಶ್ವರ ನಾಕಾದಿಂದ 200ಕ್ಕೂ ಅಧಿಕ ಕಾರ್ಯಕರ್ತರು, ವಜ್ರಹನುಮಾನ ದೇವಸ್ಥಾನದಿಂದ ಹೊನಮಲ್ಲ ಸಾರವಾಡ ನೇತೃತ್ವದಲ್ಲಿ, ಪಾಲಿಟೆಕ್ನಿಕ್ ಕಾಲೇಜ್‌ನಿಂದ ಜಮೀರ್ ಭಕ್ಷಿ ನೇತೃತ್ವದಲ್ಲಿ ಹಾಗೂ ಜಿಲ್ಲಾ ಪಂಚಾಯಿತಿ ಆವರಣದಿಂದ ಆರತಿ ಶಹಾಪುರ ನೇತೃತ್ವದಲ್ಲಿ ಯಾತ್ರೆ ಸಾಗಿಬಂತು. ಕಾಂಗ್ರೆಸ್‌ನ ಮುಂಚೂಣಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಶುಭ್ರ ಶ್ವೇತ ವಸ್ತ್ರ ಧರಿಸಿ, ಗಾಂಧಿ ಟೊಪ್ಪಿಗೆ ಧರಿಸಿದ ಕಾರ್ಯಕರ್ತರು ಕಾಲ್ನಡಿಗೆ ಮೂಲಕ ಮಹಾತ್ಮ ಗಾಂಧಿ ವೃತ್ತ ತಲುಪಿದರು.

ನಗರದ ಪ್ರಮುಖ ಮಾರ್ಗಗಳಲ್ಲಿ ಹಾಯ್ದು ಮಹಾತ್ಮ ಗಾಂಧಿ ವೃತ್ತದಲ್ಲಿ ಜಮಾಯಿಸಿತು. ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಅಧ್ಯಕ್ಷತೆಯಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಲಾಯಿತು. ಬಳಿಕ ಕಾಂಗ್ರೆಸ್ ಕಚೇರಿಗೆ ತಲುಪಿ ಸಭೆ ನಡೆಸಿದರು.

ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಲೋಣಿ, ಮಹಾತ್ಮ ಗಾಂಧಿ ಅವರು ಬೆಳಗಾವಿಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿ 100 ವರ್ಷಗಳಾಯಿತು. ತನ್ನಿಮಿತ್ಯ ಅದರ ನೆನಪಿಗಾಗಿ ಈ ವರ್ಷ ಪೂರ್ತಿ ಸಂಭ್ರಮಾಚರಣೆ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ. ಹೀಗಾಗಿ ಗಾಂಧಿ ಜಯಂತಿಯಂದು ಆಚರಣೆಗೆ ಚಾಲನೆ ನೀಡಲಾಗಿದೆ ಎಂದರು.

ರಾಜ್ಯ ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಮುಖಂಡರಾದ ಅಬ್ದುಲ್‌ಹಮೀದ್ ಮುಶ್ರೀಫ್, ಡಿ.ಎಲ್. ಚವಾಣ್, ವಿದ್ಯಾರಾಣಿ ತುಂಗಳ, ಮೇಯರ್ ಮಾಹೆಜಬೀನ್ ಅಬ್ದುಲ್‌ರಜಾಕ್ ಹೊರ್ತಿ, ಉಪಮಹಾಪೌರ ದಿನೇಶ ಹಳ್ಳಿ, ವಿಡಿಎ ಅಧ್ಯಕ್ಷ ಕನ್ನಾನ ಮುಶ್ರೀಫ್, ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಸುಭಾಷ ಕಾಲೇಬಾಗ, ಅಫ್ಜಲ್ ಜಾನವೇಕರ, ಗಂಗಾಧರ ಸಂಬಣ್ಣಿ, ಜಾಕೀರ ಮುಲ್ಲಾ, ವಸಂತ ಹೊನಮೋಡೆ, ಎಂ.ಎಂ. ಮುಲ್ಲಾ (ದ್ಯಾಬೇರಿ), ದೇಸು ಚವ್ಹಾಣ, ಅಯಾಜ ರೋಜೆವಾಲೆ, ಶಾಹಜಾನ ಮುಲ್ಲಾ, ರಮೇಶ ಗುಬ್ಬೇವಾಡ, ಲಾಲಸಾಬ ಕೋರಬು, ವಿಜಯಕುಮಾರ ಕಾಳೆ, ರಾಜೇಶ್ವರಿ ಚೊಳಕೆ, ಆನಂದ ಜಾಧವ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net