ಗಾಂಧಿ ಆತ್ಮಕಥನ ವಿಶ್ವಕ್ಕೆ ಮಾದರಿ

FotoJet (6)
Published on

ಮಧುಗಿರಿ: ಗಾಂಧಿ ಆತ್ಮಕಥನ ಪ್ರಕಟವಾಗಿ ಭಾರತೀಯರು ವಿಶ್ವದ ಗಮನ ಸೆಳೆದು ನೂರು ವರ್ಷವಾಗಿದೆ ಎಂದು ಹಿರಿಯ ಪ್ರೊ.ಸಾಹಿತಿ ಮ.ಲ.ನ.ಮೂರ್ತಿ ತಿಳಿಸಿದರು.

ಪಟ್ಟಣದ ಶ್ರೀ ಟಿ.ವಿ.ವಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಗಾಂಧೀಜಿ ಆತ್ಮಕಥನದ ಶತಮಾನದ ಆಚರಣೆಯಲ್ಲಿ ಮಾತನಾಡಿ, ಗಾಂಧಿ ಅಂತರಂಗದ ವೀಕ್ಷಣೆಗೆ ಒಳಗಾಗಿದ್ದಾರೆ. ಅವರ ಮಾತುಗಳಲ್ಲಿ ಆತ್ಮರತಿಯಿಲ್ಲ, ಆತ್ಮವಲೋಕನ ಇದೆ. ತಮ್ಮ ಬದುಕಿನ ಸಮಸ್ತ ಸತ್ಯಗಳನ್ನು ದಾಖಲಿಸಿದ್ದಾರೆ ಎಂದು ಭಾವಿಸಲಾಗದೆ ಅವರು ತಮ್ಮ ಅನುಭವಗಳನ್ನು ತಮಗೆ ತಾವೇ ಹೇಳಿಕೊಂಡಂತೆ ಬರೆದಿದ್ದಾರೆ. ತಾಯಿ&ತಂದೆ, ಹಿರಿಯರು ಅವರ ಕಟ್ಟುಪಾಡುಗಳ ಬಗ್ಗೆ ಬರೆದಿದ್ದಾರೆ. ಅವರು ಗಾಳಿ ಬೆಳಕು ಈ ನೆಲ ಜಲದೊಂದಿಗೆ ಬೆರೆತು ಭಾರತೀಯರಲ್ಲದೆ ವಿಶ್ವದ ಗಮನ ಸೆಳೆದಿದ್ದಾರೆ ಎಂದರು.

ಗ್ರಂಥಪಾಲಕ ಜಿ.ಎಸ್​.ನಾಗಭೂಷಣ್​ ಮಾತನಾಡಿ, ನನ್ನ ಜೀವನವೇ ನನ್ನ ಸಂದೇಶ ಪುಸ್ತಕ. ಪ್ರತಿಯೊಂದು ಜೀವರಾಶಿಯಲ್ಲಿ ತನ್ನನ್ನು ತಾನು ನೋಡುತ್ತೇನೆ. ಅಹಿಂಸೆ ಉಪವಾಸ ಸತ್ಯಾಗ್ರಹ ಸ್ವಚ್ಛತೆ ಪ್ರತಿಯೊಬ್ಬರೂ ಸ್ವಾತಂತ್ರ್ಯದಿಂದ ಬದುಕಬೇಕು ಎಂದು ಗಾಂಧೀಜಿ ಬಯಸಿದ್ದರು ಎಂದರು.

ಉಪನ್ಯಾಸಕ ಮಂಜುಪ್ರಸಾದ್​ ಮಾತನಾಡಿ, ಗಾಂಧೀಜಿ ಭಾರತ ಸ್ವಾತಂತ್ರ$್ಯ ಹೋರಾಟದ ಶ್ರೇಷ್ಠ ನಾಯಕರಾಗಿದ್ದು, ಅವರ ಜೀವನದ ತತ್ವ ಸಿದ್ಧಾಂತಗಳ ಮೂಲಕ ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಅವರು ಜಗತ್ತಿಗೆ ಮಾದರಿಯಾಗಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net