ಗಾಂಧೀಜಿ ತತ್ವಗಳು ಸಾರ್ವಕಾಲಿಕ; ಬಾಪುಗೌಡ ಪಾಟೀಲ

KASAPA GANDHI DATTI
ವಿಜಯಪುರದ ಕಸಾಪ ಸಭಾಭವನದಲ್ಲಿ ನಡೆದ ಮಹಾತ್ಮ ಗಾಂಧೀಜಿ ದತ್ತಿ ಕಾರ್ಯಕ್ರಮವನ್ನು ರಾಜ್ಯ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಮಾಜಿ ಅಧ್ಯಕ್ಷ ಬಾಪುಗೌಡ ಪಾಟೀಲ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಎಂ.ಎಸ್ ಪಾಟೀಲ (ಗಣಿಹಾರ), ಡಾ. ಆನಂದ ಕುಲಕರ್ಣಿ, ಸಿದ್ರಾಮಯ್ಯ ಲಕ್ಕುಂಡಿಮಠ ಮತ್ತಿತರರಿದ್ದಾರೆ.
Published on

ವಿಜಯಪುರ: ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಕೀರ್ತಿ ಮಹಾತ್ಮ ಗಾಂಧೀಜಿಯವರಿಗೆ ಸಲ್ಲುತ್ತದೆ ಎಂದು ರಾಜ್ಯ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಮಾಜಿ ಅಧ್ಯಕ್ಷ ಬಾಪುಗೌಡ ಪಾಟೀಲ ಹೇಳಿದರು.

ನಗರದ ಕಸಾಪ ಸಭಾಂಗಣದಲ್ಲಿ ಭಾನುವಾರ ನಡೆದ ಮಹಾತ್ಮ ಗಾಂಧೀಜಿ ದತ್ತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಮಹಾತ್ಮ ಗಾಂಧಿ ಅವರ ಚಿಂತನೆಗಳು, ಹೋರಾಟದ ಹಾದಿ, ತತ್ವಾದರ್ಶಗಳು ಅನುಕರಣೀಯ. ಈ ದೇಶಕ್ಕೆ ಅವರು ನೀಡಿದ ಕೊಡುಗೆ ಅಪಾರ. ಅವರ ಚಿಂತನೆಯ ಹಾದಿಯಲ್ಲಿಯೇ ದೇಶ ಮುನ್ನಡೆಯಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಪಾಟೀಲ (ಗಣಿಹಾರ) ಮಾತನಾಡಿ, ಕನ್ನಡವನ್ನು ಉಳಿಸಿ ಬೆಳೆಸುವ ಕಾಯಕವನ್ನು ಪ್ರತಿಯೊಬ್ಬ ಕನ್ನಡಿಗರು ಕಡ್ಡಾಯವಾಗಿ ಮಾಡಲೇಬೇಕು ಎಂದರು.

ತಿಕೋಟಾ ತಾಲೂಕು ಕಸಾಪ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ‘ಮಹಾತ್ಮ ಗಾಂಧೀಜಿಯವರ ಕುರಿತು ಚಿಂತನೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಶಿಕ್ಷಕ ಯಮನಪ್ಪ ಪವಾರ ಅವರು, ‘ಕನ್ನಡ ಸಾಹಿತ್ಯದಲ್ಲಿ ಭಾವೈಕ್ಯತೆಯ ಸಂದೇಶಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಆಶಾ ಬಿರಾದಾರ, ರಮೇಶ ಜಾಧವ, ಕಮಲಾ ಮುರಾಳ, ಅಲ್ಲಮಪ್ರಭಮಲ್ಲಿ ಕಾರ್ಜುನಮಠ, ಅಣ್ಣುಗೌಡ ಬಿರಾದಾರ, ಅಜುನ ಶಿರೂರ, ಸಂಗಮೇಶ ಚೂರಿ, ವಿಜಯಲಕ್ಷ್ಮಿ ಹಳಕಟ್ಟಿ, ಜಿ.ಎಸ್. ಬಳ್ಳೂರ, ಶ್ರೀಕಾಂತ ನಾಡಗೌಡ, ಜಯಶ್ರೀ ತೆಲಗ, ಅಮೋಘಸಿದ್ಧ ಪೂಜಾರಿ, ರವಿ ಕಿತ್ತೂರ, ಶಿವಾಜಿ ಮೋರೆ, ಕೆ.ಎಸ್. ಹಣಮಾಣಿ, ಗಂಗಮ್ಮ ರೆಡ್ಡಿ, ಲಕ್ಷ್ಮಿ ಬಿರಾದಾರ, ಗುರುಬಾಯಿ ಮಣೂರ, ದೇವೇಂದ್ರ ಬಡಿಗೇರ, ಕಾಶಿನಾಥ ಗೋಬ್ಬಣ್ಣವರ, ಪ್ರೀತಿ ನಾಡಗೇರಿ, ರಾಜಶೇಖರ ಹಿರೇಮಠ ಮತ್ತಿತರರಿದ್ದರು.

ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೀತಾಂಜಲಿ ಪಾಟೀಲ, ರಾಜು ಕಂಬಾಗಿ, ರಾಜೇಸಾಬ ಶಿವನಗುತ್ತಿ ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಅರುಣ ಲಿಂಗಣ್ಣ ಸಿಂಪಿ, ಕಲ್ಪನಾ ಅರುಣ ಸಿಂಪಿ, ಮಡಿವಾಳಮ್ಮ ನಾಡಗೌಡ, ಮರಲಿಂಗಪ್ಪ ಹೊರಗಿನಮನಿ, ಸರ್ವಮಂಗಲಾ ಹೂಗಾರ, ಮಹಮ್ಮದ ರಹಿಮಾನ ಇನಾಮದಾರ, ಸಂಗಮೇಶ ಜಂಗಮಶೆಟ್ಟಿ ಹಾಗೂ ಸುಭಾಷಚಂದ್ರ ನಾವಿ ಮುಂತಾದ ಗಣ್ಯ ಸಾಧಕರನ್ನು ಗೌರವ ಪ್ರಶಸ್ತಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಶಾಂತಾ ವಿಭೂತಿ ಪ್ರಾರ್ಥಿಸಿದರು. ಮಮತಾ ಮುಳಸಾವಳಗಿ ಸ್ವಾಗತಿಸಿ ಪರಿಚಯಿಸಿದರು. ಡಾ. ಮಾಧವ ಗುಡಿ ಸನ್ಮಾನ ನೆರವೇರಿಸಿದರು. ಸುರೇಶ ಜತ್ತಿ ನಿರೂಪಿಸಿದರು. ಕಮಲಾ ಮುರಾಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net