

ಮೊಳಕಾಲ್ಮೂರು: ಮಹಾತ್ಮ ಗಾಂಧೀಜಿ ಗ್ರಾಮ ಸ್ವರಾಜ್ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಸ್ವಚ್ಛತಾ ಆಂದೋಲನಕ್ಕೆ ಜನರ ಸಹಕಾರ ಆಗತ್ಯ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶೆ ರೇಷ್ಮಾ ಕೆ.ಗೋಣಿ ಅಭಿಪ್ರಾಯಪಟ್ಟರು.
ಗಾಂಧಿ ಜಯಂತಿ ಅಂಗವಾಗಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪಪಂ, ತಾಪಂ ಆಶ್ರಯದಲ್ಲಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮೊದಲು ಮನ ಆನಂತರ ಪರಿಸರ ಸ್ವಚ್ಛತೆಗೆ ಆದ್ಯತೆ ಕೊಟ್ಟರೇ ಆರೋಗ್ಯ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.
ಸಿವಿಲ್ ನ್ಯಾಯಾಧೀಶೆ ಟಿ.ಕೆ.ಪ್ರಿಯಾಂಕಾ ಮಾತನಾಡಿ, ಗಾಂಧೀಜಿ ಕನಸು ನನಸು ಮಾಡಲು ಕೇವಲ ಒಂದು ದಿನ ಸ್ವಚ್ಛತೆ ಕಾರ್ಯ ಕೈಗೊಂಡರೆ ಸಾಲದು. ಜೀವನದ ಭಾಗವಾಗಿಸಿಕೊಳ್ಳಬೇಕು. ಈ ಮೂಲಕ ವೈಯಕ್ತಿಕ ಜತೆಗೆ ಸಮಾಜದ ಆರೋಗ್ಯಕ್ಕೆ ಸಹಕರಿಸಬೇಕು ಎಂದು ಹೇಳಿದರು.
ತಹಸೀಲ್ದಾರ್ ಎಂ.ವಿ.ರೂಪಾ ಮಾತನಾಡಿ, ಸೂರ್ಯ ಚಂದ್ರ ಲೋಕವನ್ನು ಪ್ರವೇಶ ಮಾಡುವಷ್ಟು ವಿಜ್ಞಾನದಲ್ಲಿ ಸಾಧನೆ ಮಾಡಿರುವ ಭಾರತ ಸ್ವಚ್ಛತಾ ಕಾರ್ಯದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ ಎಂದು ಬೇಸರಿಸಿದರು.
ಪಪಂ ಮುಖ್ಯಾಧಿಕಾರಿ ಇ.ಲೀಲಾವತಿ, ಆರೋಗ್ಯ ಸಹಾಯಕ ಶ್ರೀನಿವಾಸ್, ಸರ್ಕಾರಿ ಅಭಿಯೋಜಕರಾದ ಮಂಜುನಾಥ, ಮಹಮದ್ ಆಲಿ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಆರ್.ಆನಂದ್, ಉಪಾಧ್ಯಕ್ಷ ಜಿ.ಮಂಜುನಾಥ, ವಕೀಲರಾದ ಪಿ.ಜಿ.ವಸಂತಕುಮಾರ, ರಾಜಶೇಖರನಾಯಕ, ಚಾಣಕ್ಯ, ಸುರೇಶ್, ಗಂಗಮೂರ್ತಿ, ಕೆ.ವಿನೋದ್, ಶಿರಸ್ತೇದಾರ ಚಿನ್ನಯ್ಯ, ಶ್ರುತಿ ಇದ್ದರು.