ಗಾಂಧೀಜಿ ನೀಡಿದ ಕೊಡುಗೆ ಅಪಾರ

Gandhiji's contribution is immense.
ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಆರ್.ಎಸ್. ಕಲ್ಲೂರಮಠ, ಲಕ್ಷ್ಮೀ ಮೋರೆ, ಡಾ. ಚಿದಾನಂದ ಆನೂರ ಮತ್ತಿತರರಿದ್ದಾರೆ.
Published on

ವಿಜಯಪುರ: ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಗಾಂಧೀಜಿ ನೀಡಿದ ಕೊಡುಗೆಗಳು ಅಪಾರವಾಗಿವೆ. ಯುವಜನತೆ ಮಹನೀಯರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರಾಚಾರ್ಯ ಡಾ. ಆರ್.ಎಸ್. ಕಲ್ಲೂರಮಠ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 1924ರ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾದ ರಾಜ್ಯಶಾಸ್ತ್ರ ಸಹ ಪ್ರಾಧ್ಯಾಪಕ ಡಾ. ಚಿದಾನಂದ ಆನೂರ ಗ್ರಾಮ ಸ್ವರಾಜ್ ಮತ್ತು ಗಾಂಧೀಜಿಯವರ ಆರ್ಥಿಕ ಚಿಂತನೆಗಳು ವಿಷಯದ ಕುರಿತು ಮತ್ತು ಸಹಾಯಕ ಪ್ರಾಧ್ಯಾಪಕ ಡಾ. ಅನಂತ ಪದ್ಮನಾಭ ಸರವಂದಿ ಅಸ್ಪಶ್ಯತೆ ನಿವಾರಣೆ ಬಗ್ಗೆ ಗಾಂಧೀಜಿಯವರ ಚಿಂತನೆಗಳು ಕುರಿತು ಉಪನ್ಯಾಸ ನೀಡಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪಿ.ಬಿ. ಬಿರಾದಾರ ಬಹುಮಾನ ವಿತರಿಸಿದರು. ಡಾ. ರಾಜಶೇಖರ ಬೆನಕನಹಳ್ಳಿ, ಲಕ್ಷ್ಮೀ ಮೋರೆ ವೇದಿಕೆಯಲ್ಲಿದ್ದರು. ಲಕ್ಷ್ಮೀ ಅಪರಾಜರ ಪ್ರಾರ್ಥಿಸಿದರು. ಡಾ. ರಾಘವೇಂದ್ರ ಗುರಜಾಲ ಸ್ವಾಗತಿಸಿದರು. ನಾಥುರಾಮ ಜಾಧವ ನಿರೂಪಿಸಿದರು. ಡಾ. ಆನಂದ ಕುಲಕರ್ಣಿ ವಂದಿಸಿದರು.

ಪ್ರಾಧ್ಯಾಪಕರಾದ ಎಂ.ಆರ್. ಕೆಂಭಾವಿ, ಡಾ. ದಾವಲಸಾ ಪಿಂಜಾರ, ರಮೇಶ ಬಳ್ಳೊಳ್ಳಿ, ಎಂ.ಆರ್. ಜೋಶಿ, ಅರ್ಪಿತಾ ಪಾಟೀಲ, ಭಾರತಿ ಹಾಲು, ಆಸೀಫ್ ರೋಜಿನದಾರ, ಮಂಜುನಾಥ ಗಾಣಿಗೇರ, ರಾಮಣ್ಣ ಕಳ್ಳಿ, ಸುಜಾತಾ ಬಿರಾದಾರ, ಪೂಜಾ ಪೂಜಾರಿ, ಸುಮಂಗಲಾ, ಎಚ್.ಎಂ. ಉಕ್ಕಲಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net