

ಹುಬ್ಬಳ್ಳಿ : ಇಲ್ಲಿನ ಲಿಂಗರಾಜ ನಗರದ ಪ್ರೋಬಸ್ ಕ್ಲಬ್ ಮತ್ತು ಶ್ರೀ ಕಟ್ಟಿ ಮಂಗಳಾದೇವಿ ಮಹಿಳಾ ಮಂಡಳ ಸಂಯುಕ್ತ ಆಶ್ರಯದಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಲಾಲ ಬಹೂದ್ದಾರ ಶಾಸ್ತ್ರೀ ಜಯಂತಿಯನ್ನು ಲಿಂಗರಾಜ ನಗರದ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಅ. 2 ರಂದು ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ.
ನಿವೃತ್ತ ಪ್ರಾಚಾರ್ಯ ಡಾ. ಶೈಲಜಾ ಕಂಕನವಾಡಿ ಮತ್ತು ನಿವೃತ್ತ ಶಿಕ್ಷಕ ಎಸ್.ಎಸ್. ಕರಡಿ ಉಪನ್ಯಾಸಗಳನ್ನು ನೀಡಲಿದ್ದು, ಮಂಡಳದ ಅಧ್ಯಕ್ಷೆ ಗಿರಿಜಾ ಸಂಗೊಳ್ಳಿ ಅತಿಥಿಯಾಗಿ ಆಗಮಿಸಲಿದ್ದು, ಆಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷ ಡಾ. ಬಸವರಾಜ ಕೋಟಿ ವಹಿಸಲಿದ್ದಾರೆ ಎಂದು ಕಾರ್ಯದರ್ಶಿ ಉಮೇಶ ಪಾಟೀಲ ತಿಳಿಸಿದ್ದಾರೆ.