

ಬೆಳ್ತಂಗಡಿ: ಗಾಂಧೀಜಿಯವರ ತತ್ವಗಳು ನಶಿಸಿ ಹೋಗಿದ್ದರೂ ಕೆಲವು ತತ್ವಗಳನ್ನು ಇವತ್ತಿಗೂ ಪಾಲಿಸುತ್ತಾರೆ. ಸತ್ಯವನ್ನು ಹೇಳಬೇಕು, ಸರಳವಾಗಿರಬೇಕು, ನಮ್ಮ ಕೆಲಸವನ್ನು ನಾವೇ ಮಾಡಬೇಕು ಒಂದು ಕೆನ್ನೆಗೆ ಒಡೆದಾಗ ಇನ್ನೊಂದು ಕೆನ್ನೆ ತೋರಿಸಬೇಕು ಎಂದು ರೆಸಿಡೆನ್ಸಿಯಲ್ ಕಾಲೇಜಿನ ಪ್ರಾಂಶುಪಾಲ ಸುನೀಲ್ ಪಂಡಿತ್ ಹೇಳಿದರು.
ಉಜಿರೆ ರತ್ನಮಾನಸ ಜೀವನ ಶಿಕ್ಷಣ ವಿದ್ಯಾರ್ಥಿನಿಲಯದಲ್ಲಿ ರೆಸಿಡೆನ್ಶಿಯಲ್ ಕಾಲೇಜಿನ ಸಹಭಾಗಿತ್ವದೊಂದಿಗೆ ನಡೆದ ಗಾಂಧೀಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರತ್ನಮಾನಸ ವಸತಿ ನಿಲಯದ ಪಾಲಕರಾದ ಯತೀಶ್ ಕೆ.ಬಳಂಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಲವನ್ನು ನೋಡುವುದರ ಮೂಲಕ ಕಲಿಯಬೇಕು, ಕೆಲವನ್ನು ಮಾಡುವುದರ ಮೂಲಕ ಕಲಿಯಬೇಕು.ಮಾರ್ಕ್ಸ್‌ಗಿಂತ ರಿಮಾರ್ಕ್ ಇಲ್ಲದೆ ಬದುಕುವುದು ಉತ್ತಮ. ಇತ್ತೀಚೆಗಿನ ದಿನಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಜೀವನ ಶಿಕ್ಷಣ ಅಗತ್ಯ ಎಂದರು.
ರೆಸಿಡೆನ್ಶಿಯಲ್ ಕಾಲೇಜಿನ ಪಾಲಕ ವಿಶ್ವನಾಥ ಹಾಗೂ ಶಿಕ್ಷಕ ಅಕಿಲ್, ರೋಷನ್, ಉಮೇಶ್ ಮತ್ತು ರತ್ನಮಾನಸದ ಶಿಕ್ಷಕರಾದ ಉದಯರಾಜ್, ದೀಪಕ್ ಕೆ.ಉಪಸ್ಥಿತರಿದ್ದರು. ರೆಸಿಡೆನ್ಶಿಯಲ್ ಕಾಲೇಜಿನ ಪಾಂಶುಪಾಲ ಸುನೀಲ್ ಪಂಡಿತ್ ಸ್ವಾಗತಿಸಿ ರತ್ನಮಾನಸದ ಅಧ್ಯಾಪಕ ರವಿಚಂದ್ರ ವಂದಿಸಿದರು.