ಅಭಿವೃದ್ಧಿ ಹೊಂದಲು ವ್ಯಸನಮುಕ್ತರಾಗಿ

Untitled design (1)
ಹರಪನಹಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ ಗಾಂಧಿಸ್ಮತಿ ಮತ್ತು ಪಾನಮುಕ್ತ ಸಾಧಕರಿಗೆ ಅಭಿನಂದನೆ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪಿ.ಎಸ್.ಅರವಿಂದ ಉದ್ಘಾಟಿಸಿದರು. ಪ್ರಮುಖರಾದ ಎಸ್.ಎಂ.ಮಲ್ಲಿಕಾರ್ಜುನ್, ಎಚ್.ಎಂ.ಕರಿಬಸಯ್ಯ, ಬಿ.ತಿಪ್ಪೇಸ್ವಾಮಿ, ಜಿ.ಬಿ.ಸಿದ್ದಪ್ಪ, ಲುಸುಮಾ ಜಗದೀಶ್, ಶೈಲಜಾ, ಎನ್.ಎಸ್.ಮಮತಾ ಇತರರಿದ್ದರು.
Published on

ಹರಪನಹಳ್ಳಿ: ಸ್ವಾತಂತ್ರ್ಯ ನಂತರ ಗಾಂಧೀಜಿ ಕನಸಾದ ಗ್ರಾಮ ಸ್ವರಾಜ್, ಸ್ವಚ್ಛತೆ ಹಾಗೂ ವ್ಯಸನಮುಕ್ತ ರಾಷ್ಟ್ರದ ಕನಸನ್ನು ಸರ್ಕಾರಗಳು ನನಸು ಮಾಡಲಿಲ್ಲ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪಿ.ಎಸ್. ಅರವಿಂದ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ತರಳಬಾಳು ಕಲ್ಯಾಣಮಂಟಪದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಹಾಗೂ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಗಾಂಧಿಸ್ಮತಿ ಹಾಗೂ ಪಾನಮುಕ್ತ ಸಾಧಕರಿಗೆ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಳ್ಳಿಗಳು ಪ್ರಗತಿ ಕಂಡರೆ ದೇಶ ಅಭಿವೃದ್ಧಿ ಹೊಂದಲಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕಾಪಾಡಬೇಕು. ಅಭಿವೃದ್ಧಿ ಹೊಂದಲು ವ್ಯಸನಮುಕ್ತರಾಗಿ ಎಂದ ಅವರು, ಮಹಿಳೆಯರು ಶಿಕ್ಷಣವಂತರಾಗಿ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ತಿಳಿಸಬೇಕು ಎಂದರು.

ಎಸ್‌ಕೆಡಿಆರ್‌ಡಿಪಿ ಟ್ರಸ್ಟ್ ಸಹಾಯಕ ನಿರ್ದೇಶಕ ಜನಾರ್ದನ ಮಾತನಾಡಿ, ಗಾಂಧೀಜಿ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಸರ್ವಧರ್ಮೀಯರು ಸಹಕರಿಸಿದಾಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದರು. ಫಾದರ್ ಸಿಲ್ವೇಸ್ಟರ್ ಪಿರೇರಾ, ಮಂಜುನಾಥ ಜಿ.ಬಿ., ಯೋಜನಾಧಿಕಾರಿ ಸುಬ್ರಹ್ಮಣ್ಯ ಮಾತನಾಡಿದರು. ಪ್ರಮುಖರಾದ ಟಿ.ಎಂ.ಕೊಟ್ರಯ್ಯ, ಲಿಂಬ್ಯಾನಾಯ್ಕ, ಎಚ್.ಚಂದ್ರಪ್ಪ, ವಿಜಯ ಕುಮಾರ್ , ಹಾಲೇಶ್, ಎಚ್.ಎಂ.ತಿಪ್ಪೇಸ್ವಾಮಿ, ಲತಿಫ್ಸಾಬ್ ಎಂ.ಡಿ, ಶೋಭಾ ಬಾಗಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net