ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ರಾಜರ್ಷಿ ಎಂದು ಬಣ್ಣಿಸಿದ್ದ ಗಾಂಧೀಜಿ

2 ckm 4
ಚಿಕ್ಕಮಗಳೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಷ್ಟಾನದಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಿರಿಯರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಶ್ರೇಷ್ಟ ಸಾರ್ಥಕ ಸ್ಮರಣಿಕೆ ಸಲ್ಲಿಕೆ ಕಾರ್ಯಕ್ರಮದಲ್ಲಿ ನಿವೃತ್ತ ಜಿಲ್ಲಾ ಸರ್ಜನ್ ಡಾ. ಟಿ.ವಿ. ರಾಮಕೃಷ್ಣ ಅವರನ್ನು ಸನ್ಮಾನಿಸಲಾಯಿತು.
Published on

ಚಿಕ್ಕಮಗಳೂರು: ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತವನ್ನು ತಿಳಿದುಕೊಂಡು ಮಹಾತ್ಮಗಾಂಧಿಜೀ ಅವರು ಒಡೆಯರ್ ಅವರನ್ನು ರಾಜರ್ಷಿ ಎಂದು ಬಣ್ಣಿಸಿದ್ದರು. ಇದು ಒಡೆಯರ್ ಅವರ ಸಮಾಜ ಸೇವೆ ಯಾವ ಮಟ್ಟಕ್ಕಿತ್ತು ಎನ್ನುವುದನ್ನು ತೋರಿಸುತ್ತದೆ ಎಂದು ಸಾಹಿತಿ ಡಾ.ಬೆಳವಾಡಿ ಮಂಜುನಾಥ್ ತಿಳಿಸಿದರು.

ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಷ್ಟಾನದಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಿರಿಯರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಶ್ರೇಷ್ಟ ಸಾರ್ಥಕ ಸ್ಮರಣಿಕೆ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಭಿವೃದ್ಧಿ ಪಡಿಸದ ಕ್ಷೇತ್ರವೇ ಇಲ್ಲ ಎಂದು ಮೈಸೂರು ಅರಸ ಸಾಧನೆಯನ್ನು ಬಣ್ಣಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಸರ್ಜನ್ ಡಾ. ಟಿ.ವಿ.ರಾಮಕೃಷ್ಣ, ಕೆ.ಆರ್. ಪೇಟೆಯಲ್ಲಿ ಸುಮಾರು ೧೪ ವರ್ಷಗಳ ಕಾಲ ಸೇವೆ ಸಲ್ಲಿಸಿದೆ. ನನ್ನನ್ನು ಅಲ್ಲಿಂದ ವರ್ಗಾವಣೆ ಆಗಲು ಬಿಡದೇ ನನ್ನ ಬಗ್ಗೆ ತುಂಬಾ ಪ್ರೀತಿ ತೋರಿದ ಅಲ್ಲಿಯ ಜನರ ಮತ್ತು ಚಿಕ್ಕಮಗಳೂರು ಜನರ ಪ್ರೀತಿಯನ್ನು ನಾನು ಮರೆಯಲಾರೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿದ ಇಂಡಿಯನ್ ಓವರ್‌ಸಿಸ್ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಎಸ್.ಆರ್.ಪ್ರಶಾಂತ್ ಅವರು ತಮ್ಮ ಅವಧಿಯಲ್ಲಿ ಸ್ತಿçÃಶಕ್ತಿ ಸಂಘಗಳನ್ನು ಸ್ಥಾಪನೆ ಮಾಡುವ ಜೊತೆಗೆ ಸಾಲಮೇಳವನ್ನು ನಡೆಸಿ ಜನರ ಅರ್ಥಿಕ ಅಭಿವೃದ್ಧಿಗೆ ಶ್ರಮಿಸಿದ ಕ್ಷಣಗಳನ್ನು ಮೆಲುಕು ಹಾಕಿದರು.
ಕಾರ್ಯಕ್ರಮ ಉದ್ಘಾಟಿಸಿದ ತಾಪಂ ಮಾಜಿ ಅಧ್ಯಕ್ಷ ಕೆ.ಬಿ.ಅನಂತೇಗೌಡ ಮಾತನಾಡಿ, ಡಾ.ರಾಮಕೃಷ್ಣ ಮತ್ತು ಮ್ಯಾನೇಜರ್ ಪ್ರಶಾಂತ್, ಇಂಜಿನಿಯರ್ ಶಿವಪ್ಪ ನಾಯ್ಕ ಇವರ ಸೇವೆಯ ನಿಕಟ ಸಂಬAಧ ನನಗಿದ್ದು. ಅವರ ಸೇವೆಯನ್ನು ಸದಾ ಸ್ಮರಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.
ನಿವೃತ್ತ ಜಿಲ್ಲಾ ಸರ್ಜನ್ ಡಾ. ಟಿ.ವಿ. ರಾಮಕೃಷ್ಣ, ಇಂಡಿಯನ್ ಓವರ್‌ಸಿಸ್ ಬ್ಯಾಂಕ್‌ನ ನಿವೃತ್ತ ಹಿರಿಯ ಪ್ರಬಂಧಕ ಎಸ್.ಆರ್. ಪ್ರಶಾಂತ್, ಬಿಎಸ್‌ಎನ್‌ಎಲ್ ಸಹಾಯಕ ಮುಖ್ಯ ಅಭಿಯಂತರ ಶಿವಪ್ಪ ನಾಗಾವಿ ಮತ್ತು ಶಿಕ್ಷಕಿ ಅಂಗಡಿ ಶ್ರೀದೇವಿ, ರಂಗಕರ್ಮಿ ದಿಣ್ಣೇಕೆರೆ ಡಿ.ಎಂ.ಮAಜುನಾಥಸ್ವಾಮಿ, ಪ್ರಗತಿಪರ ಕೃಷಿಕ ಲಾಯ್ಡ್ ಅಮರ್ ಡಿಸೋಜ, ಆಂಗ್ಲ ಭಾಷಾ ಅಧ್ಯಾಪಕ ಕೆ.ಎನ್.ಮೋಹನ್, ಗ್ರಾಮ ಲೆಕ್ಕಾಧಿಕಾರಿ ಎಂ.ಎಸ್. ಹುಚ್ಚೇಗೌಡ, ಪಂಚಾಯತ್‌ರಾಜ್ ಇಲಾಖೆಯ ಎಚ್.ಎಂ.ಧರ್ಮೇಗೌಡ ಅವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಪ್ರತಿಷ್ಟಾನದ ಅಧ್ಯಕ್ಷ ಮಾವಿನಕೆರೆ ದಯಾನಂದ್, ಶಿಕ್ಷಕ ಟಿ.ಎಂ.ಕೃಷ್ಣಮೂರ್ತಿ, ಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಡಿ.ಪಿ. ಲೋಕೇಗೌಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net