

ಮಂಡ್ಯ : ಮೇಲುಕೋಟೆ ಗ್ರಾಮ ಪಂಚಾಯಿತಿಗೆ 4ನೇ ಬಾರಿ ರಾಜ್ಯಮಟ್ಟದ ಗಾಂಧಿಗ್ರಾಮ ಪುರಸ್ಕಾರ ದೊರೆತಿದೆ. ಸೋಮವಾರ ನಡೆಯುವ ರಾಜ್ಯಮಟ್ಟದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ ಮಾಡಲಿದ್ದಾರೆ.
ಮೇಲುಕೋಟೆಗೆ 2015-16, 2017-18, 2018-19 ಮತ್ತು 2022-23 ರಲ್ಲೂ ಪ್ರಶಸ್ತಿ ಲಭಿಸಿದ್ದು, ಸ್ವಚ್ಛತೆ, ಮೂಲಸೌಕರ್ಯನಿರ್ವಹಣೆ, ಕಡತನಿರ್ವಹಣೆ, ಕುಡಿಯುವ ನೀರಿನ ವ್ಯವಸ್ಥೆ, ಗ್ರಾಮೀಣ ಪ್ರದೇಶದಲ್ಲಿ ಸ್ಥಾಯಿ ಸಮಿತಿಗಳ ನಿರ್ವಹಣೆ, ಮಕ್ಕಳ ಮತ್ತು ಮಹಿಳಾ ಗ್ರಾಮಸಭೆ, ಕಾನೂನು ಅರಿವು ಶಿಬಿರ, ಕೆಡಿಸಿ ಸಭೆ, ಕಂದಾಯ ವಸೂಲಾತಿ, ಅನುದಾನಗಳ ಸದ್ಬಳಕೆ, ನಿಯಮಿತವಾಗಿ ಗ್ರಾಮಸಭೆಗಳ ಆಯೋಜನೆ ಮುಂತಾದ ಅಂಶಗಳ ಟಾಸ್ಕ್ ಅನ್ನು ಅಚ್ಚಕಟ್ಟಾಗಿ ನಿರ್ವಹಣೆ ಮಾಡುವ ಪಂಚಾಯಿತಿಗೆ ಪುರಸ್ಕಾರ ನೀಡಲಾಗುತ್ತದೆ.