ಗಾಂಧೀಜಿ ಹೋರಾಟ ಅವಿಸ್ಮರಣೀಯ

02Jaggu6-web
ಬೆಳಗಾವಿ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನಲ್ಲಿ ಸೋಮವಾರ ಗಾಂಧಿ, ಶಾಸಿ ಜಯಂತಿ ಆಚರಿಸಲಾಯಿತು. ಡಾ.ಹನಮಂತ ಮೇಲಿನಮನಿ, ವಿ.ಪಿ ಹಿರೇಮಠ, ಪ್ರೊ.ಎಚ್.ಎಂ.ಚನ್ನಪ್ಪಗೋಳ, ಗಿರಿಜಾ ಹಿರೇಮಠ ಇತರರಿದ್ದರು.
Published on

ಬೆಳಗಾವಿ: ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದೂರ್ ಶಾಸ್ತ್ರಿ ಅವರು ಸತ್ಯ, ಸರಳ ಜೀವನದ ಮೂಲಕ ಜಗತ್ತಿನ ಚರಿತ್ರೆಯಲ್ಲಿ ಸ್ಥಾನ ಪಡೆದವರು. ಅವರನ್ನು ಸ್ಮರಿಸುವ ಋಣಭಾರ ಸಮಾಜದ ಮೇಲೆ ಇದೆ ಎಂದು ಪ್ರಾಚಾರ್ಯ ಡಾ.ಹನುಮಂತ ಮೇಲಿನಮನಿ ಹೇಳಿದರು.

ನಗರದ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 155ನೇ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸತ್ಯ, ಅಹಿಂಸೆ ಮತ್ತು ಮಾನವತಾವಾ ದವನ್ನು ಪ್ರಪಂಚಕ್ಕೆ ಪರಿಚಯಿಸಿದ ಮಹಾತ್ಮ ಗಾಂಧೀಜಿ ತಮ್ಮ ಜೀವನವನ್ನು ಸಶಕ್ತ ರಾಷ್ಟ್ರ ನಿರ್ಮಾಣದಲ್ಲಿ ಮುಡಿಪಾಗಿಟ್ಟಿದ್ದರು ಎಂದು ಶ್ಲಾಘಿಸಿದರು.

ವಿ.ಪಿ.ಹಿರೇಮಠ ಮಾತನಾಡಿ, ಸರಳ, ಶ್ರೇಷ್ಠ ವ್ಯಕ್ತಿತ್ವ ಹೊಂದಿದ್ದ ಲಾಲ್ ಬಹಾದೂರ್ ಶಾಸ್ತ್ರಿ ಅವರು ಭಾರತ ಕಂಡ ಶ್ರೇಷ್ಠ ಪ್ರಧಾನಿಗಳಲೊಬ್ಬರು. ದಿಟ್ಟ ನಿರ್ಧಾರಗಳಿಂದ ಶಾಸೀಜಿ ದೇಶಕ್ಕೆ ಅನಂತ ಸೇವೆ ಸಲ್ಲಿಸಿದ್ದಾರೆ ಎಂದರು. ಪ್ರೊ.ಎಚ್.ಎಂ.ಚನ್ನಪ್ಪಗೋಳ ಮಾತನಾಡಿದರು.

ಎನ್‌ಎಸ್‌ಎಸ್ ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳು ಹಾಗೂ ಬೋಧನಾ ಸಿಬ್ಬಂದಿ ಸೇರಿ ಮಹಾವಿದ್ಯಾಲಯದ ಎಲ್ಲ ತರಗತಿ, ಆವರಣ ಸ್ವಚ್ಛಗೊಳಿಸಿದರು. ಪ್ರಾಚಾರ್ಯೆ ಗಿರಿಜಾ ಹಿರೇಮಠ, ಎಲ್ಲ ಬೋಧಕ ಸಿಬ್ಬಂದಿ ಇದ್ದರು. ನಿಧಿ ಪ್ರಾರ್ಥಿಸಿದರು. ತನಿಷಾ ಸ್ವಾಗತಿಸಿದರು. ವಿದ್ಯಾವತಿ ದಂಡಿಮಠ ನಿರೂಪಿಸಿದರು. ಕ್ಷಿತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net