ಗಾಂಧಿ ಜಗತ್ತಿಗೆ ಅಹಿಂಸೆಯ ಮಾರ್ಗ ಕಲಿಸಿದ ಮಹಾನ್ ವ್ಯಕ್ತಿ : ಉಪನ್ಯಾಸಕ ಅರವಿಂದ್ ಚೊಕ್ಕಾಡಿ ಅಭಿಪ್ರಾಯ

mng-31jan-gandi
Published on



ಮಂಗಳೂರು : ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಶ್ರೀಸಾಮಾನ್ಯರ ಆಯೋಗದ ವತಿಯಿಂದ ಗಾಂಧಿ ಸ್ಮತಿ ಕಾರ್ಯಕ್ರಮ
ನಗರದ ಜೆಪ್ಪುವಿನ ಸಂತ ಆಂತೋಣಿ ಸೇವಾ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಉಪನ್ಯಾಸಕ ಅರವಿಂದ್ ಚೊಕ್ಕಾಡಿ ಮಾತನಾಡಿ ‘ ಗಾಂಧಿ ಜಗತ್ತಿಗೆ ಸತ್ಯ ಮತ್ತು ಅಹಿಂಸೆಯ ಪ್ರಭಾವಶಾಲಿ ಮಾರ್ಗವನ್ನು ಕಲಿಸಿದ ಮಹಾನ್ ವ್ಯಕ್ತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಸಹ ಕುಲಪತಿ ಫಾ. ಮೆಲ್ವಿನ್ ಪಿಂಟೊ ಮಾತನಾಡಿ ‘
ಗಾಂಧಿಯ ಮೂಲಭೂತ ಮೌಲ್ಯಗಳನ್ನು ಅಳವಡಿಸಿಕೊಂಡರೆ ವ್ಯಕ್ತಿಯ ವ್ಯಕ್ತಿತ್ವದ ಪರಿವರ್ತನೆ ಸಾಧ್ಯ .ತಂತ್ರಜ್ಞಾನ ಮತ್ತು ಮಾಧ್ಯಮ
ಪ್ರಭಾವಿತ ಇಂದಿನ ಜಗತ್ತಿನಲ್ಲಿ ಗಾಂಧಿಯ ಮೌಲ್ಯಗಳನ್ನು ಅನುಸರಿಸುವುದು ಅಗತ್ಯ ಎಂದರು
ಸಂಸ್ಥೆಯ ನಿರ್ದೇಶಕ ಫಾ. ಜೆ. ಬಿ. ಕ್ರಾಸ್ತಾ ಕಾರ್ಯಕ್ರಮ ಉದ್ಘಾಟಿಸಿದರು. ಫಾ. ರೂಪೇಶ್ ಮಾಡ್ತಾ ಮುಖ್ಯ ಅತಿಥಿಯಾಗಿದ್ದರು.
ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ಟೆಲಿನೊ ವಂದಿಸಿದರು. ರೋಮನ್
ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net