ಧರ್ಮಸ್ಥಳದಿಂದ ಗಾಂಧಿ ರಾಮರಾಜ್ಯದ ಕನಸು ಸಾಕಾರ- ಜಪ್ಪಿನಮೊಗರು ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಮೇಯರ್ ಸುಧೀರ್ ಶೆಟ್ಟಿ ಹೇಳಿಕೆ

IMG-20231008-WA0088
Published on

ಮಂಗಳೂರು: ಧರ್ಮಸ್ಥಳದಿಂದ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ವಿ.ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಮಹಾತ್ಮ ಗಾಂಧಿ ರಾಮರಾಜ್ಯದ ಕನಸು ಸಾಕಾರಗೊಳ್ಳುವ ದಿಕ್ಕಿನಲ್ಲಿ ಕೆಲಸಗಳು ನಿರಂತರ ನಡೆಯುತ್ತಿವೆ ಎಂದು ಮೇಯರ್ ಸುಧೀರ್ ಶೆಟ್ಟಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮಂಗಳೂರು- ಬಜಪೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ- ಮಂಗಳೂರು, ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳು- ಜಪ್ಪಿನಮೊಗರು ವಲಯ ಜಪ್ಪಿನಮೊಗರು ವಲಯ ಸಹಯೋಗದಲ್ಲಿ ನಗರದ ಆರ್ಯಸಮಾಜ ಮರಾಠ ಭವನದಲ್ಲಿ ಭಾನುಬಾರ ಆಯೋಜಿಸಿದ ಗಾಂಧಿ ಸ್ಮತಿ- ಜನಜಾಗೃತಿ ಸಮಾವೇಶದಲ್ಲಿ ನೂತನ ನವಜೀವನ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.
ಶಾಸಕ ಡಿ.ವೇದವ್ಯಾಸ ಕಾಮತ್, ಶ್ರೀ.ಕ್ಷೇ.ಧ,ಗಾ.ಯೋಜನೆ ಬಿ.ಸಿ.ಟ್ರಸ್ಟ್ ಧರ್ಮಸ್ಥಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಲ್.ಎಚ್. ಮಂಜುನಾಥ್ ಆಶಯ ಭಾಷಣ ನೆರವೇರಿಸಿದರು.
ಅಖಿಲ ಜನಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿಸದಸ್ಯೆ ವೀಣಾ ಮಂಗಳ, ಜಪ್ಪಿನಮೊಗರು ಶ್ರೀ ಗಣೇಶೋತ್ಸವ ಸೇವಾಸಮಿತಿ ಅಧ್ಯಕ್ಷ ನಾಗೇಂದ್ರ ಕುಮಾರ್, ಶ್ರೀ.ಕ್ಷೇ.ಧ,ಗಾ.ಯೋಜನೆ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಪ್ರಗತಿಬಂಧು ಕೇಂದ್ರ ಒಕ್ಕೂಟ ಮಂಗಳೂರು ಅಧ್ಯಕ್ಷ ಸತೀಶ್ ದೀಪಂ ಕುಂಪಲ, ಬಜಪೆ ಒಕ್ಕೂಟ ಅಧ್ಯಕ್ಷ ಹರೀಶ್ಚಂದ್ರ ಕೋಟ್ಯಾನ್, ನ್ಯಾಯವಾದಿ ಮಹಮ್ಮದ್ ಇಸ್ಮಾಯಿಲ್ ಮುಖ್ಯ ಅತಿಥಿಗಳಾಗಿದ್ದರು.
ಯೋಜನಾಧಿಕಾರಿ ಚೆನ್ನಕೇಶವ ಸ್ವಾಗತಿಸಿದರು. ಉಳ್ಳಾಲ ವಲಯ ಮೇಲ್ವಿಚಾರಕಿ ಜಯಂತಿ ಮತ್ತು ಡಾ.ನಮೃತ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net