ಮಲ್ಯರಬೆಟ್ಟಿನಲ್ಲಿ ಗಾಂಧಿ, ಶಾಸ್ತ್ರಿ ಜಯಂತಿ ಆಚರಣೆ

gan (5)
Published on

ಕುಂದಾಪುರ: ಗಂಗೊಳ್ಳಿ ಕಲಾಶ್ರೀ ಶಿಕ್ಷಣ ಪ್ರೇಮಿ ಬಳಗ ಮತ್ತು ಶ್ರೀ ನಾರಾಯಣಗುರು ಜನಸೇವಾ ಬಳಗ ವತಿಯಿಂದ ಮಲ್ಯರಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಮಹಾತ್ಮಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು.

ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ಜಯಂತಿ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಸವಾಜ ಸೇವೆ ಸಲ್ಲಿಸಿದ ಅನಿತಾ ಶೇಟ್ ಮತ್ತು ಜಯಂತಿ ಖಾರ್ವಿ ಅವರನ್ನು ಗೌರವಿಸಲಾಯಿತು.

ಗಂಗೊಳ್ಳಿ ಶ್ರೀ ನಾರಾಯಣಗುರು ಜನಸೇವಾ ಬಳಗ ಅಧ್ಯಕ್ಷ ಗೋಪಾಲ ಪೂಜಾರಿ, ಕಲಾಶ್ರೀ ಶಿಕ್ಷಣ ಪ್ರೇಮಿ ಬಳಗ ಅಧ್ಯಕ್ಷೆ ಸುಮಿತ್ರಾ ಈಶ್ವರ್, ಜಿ.ಈಶ್ವರ, ಹರ್ಷೇಂದ್ರ ಆಚಾರ್ಯ, ಲತಾ ಖಾರ್ವಿ, ಶೋಭಾ ಖಾರ್ವಿ, ಪದ್ಮಾವತಿ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ರೇಖಾ ಖಾರ್ವಿ ಸ್ವಾಗತಿಸಿದರು. ಸುಮಿತ್ರಾ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net