ಬಿಜೆಪಿಯಿಂದ ಗಾಂಧಿ-ಶಾಸ್ತ್ರಿ ಜಯಂತಿ ಆಚರಣೆ

BJP GANDHI JAYANTI
ವಿಜಯಪುರದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು. ಆರ್.ಎಸ್. ಪಾಟೀಲ ಕೂಚಬಾಳ, ವಿಜುಗೌಡ ಪಾಟೀಲ ಮತ್ತಿತರರಿದ್ದಾರೆ.
Published on

ವಿಜಯಪುರ: ನಗರದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಬುಧವಾರ ಬಿಜೆಪಿಯಿಂದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು.

ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮಾತನಾಡಿ, ಮಹಾತ್ಮ ಗಾಂಧೀಜಿ, ಶಾಸ್ತ್ರೀಜಿಯವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಗಾಂಧೀಜಿಯವರು ಅಹಿಂಸಾವಾದಿಯಾಗಿದ್ದರು. ಗಾಂಧೀಜಿಯವರು ಸ್ವಚ್ಛತೆಗೆ ಬಹಳ ಮಹತ್ವ ನೀಡಿದ್ದಾರೆ. ಶಾಸ್ತ್ರೀಜಿಯವರ ಕೊಡುಗೆ ಅನನ್ಯವಾಗಿದೆ ಎಂದರು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಗಾಂಧೀಜಿ, ಶಾಸ್ತ್ರೀಜಿಯವರು ದೇಶಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಇಂತಹ ಸಂದರ್ಭಗಳಲ್ಲಿ ಮಹಾತ್ಮರ ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬಡತನದಲ್ಲಿಯೇ ಹುಟ್ಟಿ ಬಡತನಲ್ಲಿಯೇ ಬೆಳೆದು ಕೊನೆಗೆ ಬಡತನದಲ್ಲಿಯೇ ನಿಧನರಾದ ಭಾರತದ ಏಕೈಕ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರಾಗಿದ್ದಾರೆ ಎಂದರು.

ಮಾಜಿ ಶಾಸಕ ರಮೇಶ ಭೂಸನೂರ, ಮುಖಂಡರಾದ ವಿಜುಗೌಡ ಪಾಟೀಲ, ರಾಹುಲ ಜಾಧವ, ಮಲ್ಲಿಕಾರ್ಜುನ ಗಡಗಿ, ಎಸ್.ಎ. ಪಾಟೀಲ, ಈರಣ್ಣ ರಾವೂರ, ಮಳುಗೌಡ ಪಾಟೀಲ, ಸಾಬು ಮಾಶ್ಯಾಳ, ಶಂಕರ ಹೂಗಾರ, ಲಕ್ಷ್ಮಿ ಕನ್ನೊಳ್ಳಿ, ವಿವೇಕಾನಂದ ಡಬ್ಬಿ, ವಿಜಯ ಜೋಶಿ, ಸಂಜಯ ಪಾಟೀಲ ಕನಮಡಿ, ರಾಜಕುಮಾರ ಸಗಾಯಿ, ಗುರುಲಿಂಗಪ್ಪ ಅಂಗಡಿ, ರಾಜೇಶ ತಾವಸೆ, ಉದಯ ಕನ್ನೊಳ್ಳಿ, ಕೃಷ್ಣಾ ಗುನಾಳಕರ, ಮಲ್ಲಮ್ಮ ಜೋಗೂರ, ಮಧು ಪಾಟೀಲ, ನೀತಾ ದೇಸಾಯಿ, ಗೀತಾ ಚೌಧರಿ, ಸುಸ್ಮೀತಾ ವಾಂಡಕರ, ಸುವರ್ಣಾ ಕುರ್ಲೆ, ಜಗದೀಶ ಮುಚ್ಚಂಡಿ, ವಿಠಲ ನಡುವಿನಕೇರಿ, ಆನಂದ ಮುಚ್ಚಂಡಿ, ವಿಕಾಸ ಪದಕಿ, ಪಾಪುಸಿಂಗ್ ರಜಪೂತ, ಪ್ರವೀಣ ಕೂಡಗಿ, ಪ್ರವೀಣ ವಂದಾಲಮಠ, ರಾಚು ಬಿರಾದಾರ, ರಾಜು ವಾಲಿ, ಪ್ರಕಾಶ ಚವಾಣ್, ಪ್ರವೀಣ ನಾಟಿಕಾರ, ಪ್ರೇಮ ಕಲಘಟಗಿ, ಮಹಾಂತೇಶ ಹುಲ್ಲೂರ, ದತ್ತಾ ಗೋಲಾಂಡೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net