ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಗಾಂಧೀ-ಶಾಸ್ತ್ರೀ ಜಯಂತಿ ಆಚರಣೆ

exp
Published on

ಮಂಗಳೂರು: ನಿಸ್ವಾರ್ಥ ಮತ್ತು ಅಹಿಂಸಾ ತತ್ತ್ವದ ಮೂಲಕ ವಿಶ್ವಮಾನ್ಯರಾದ ಗಾಂಧೀಜಿಯ ಕೊಡುಗೆಗಳು ಅಪಾರ. ಅವರ ಹಲವು ಹೋರಾಟಗಳ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು ಎಂದು ಪ್ರಾಂಶುಪಾಲ ಡಾ.ಎನ್.ಕೆ.ವಿಜಯನ್ ಕರಿಪ್ಪಾಲ್ ಹೇಳಿದರು.

ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ ಗಾಂಧೀ ಮತ್ತು ಶಾಸ್ತ್ರೀ ಜಯಂತಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಾತ್ಮ ಗಾಂಧೀಜಿಯಂತೆ ಲಾಲ್ ಬಹದ್ದೂರು ಶಾಸ್ತ್ರೀ ಅವರ ಬದುಕಿನ ಆದರ್ಶಗಳನ್ನು ನಾವು ಮರೆಯಬಾರದು. ಗಾಂಧೀಜಿಯವರ ಅಹಿಸ್ಮಾತ್ಮ ನೀತಿ ವಿಶ್ವದಲ್ಲೇ ಖ್ಯಾತಿ ಪಡೆದಿದೆ. ಅವರ ತತ್ವ, ಆದರ್ಶಗಳು ಇಂದಿನ ಪೀಳಿಗೆಗೆ ಆದರ್ಶವಾಗಿದ್ದು, ಅವರ ಪುಸ್ತಕಗಳನ್ನು ಓದಿ ಜ್ಞಾನ ವದ್ಧಿಸಿಕೊಳ್ಳಬೇಕು. ದೇಶದ ಉದ್ಧಾರಕ್ಕಾಗಿ ಹಲವು ಯೋಜನೆಗಳನ್ನು ತಂದಿದ್ದರು. ಹಳ್ಳಿಗಳ ಉದ್ಧಾರ ಅವರ ಕನಸಾಗಿತ್ತು ಎಂದರು.

ವಿದ್ಯಾರ್ಥಿಗಳಾದ ಗ್ಲೆನ್ ಪ್ರಿನ್ಸ್ ಮತ್ತು ಸೌಮ್ಯಾ ಉಮೇಶ್ ಅವರು ಕ್ರಮವಾಗಿ ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಕುರಿತು ಮಾತನಾಡಿದರು. ಉಪಪ್ರಾಂಶುಪಾಲ ಸುಬ್ರಹ್ಮಣ್ಯ ಉಡುಪ ಹಾಗೂ ಕೋಚಿಂಗ್ ಮುಖ್ಯಸ್ಥ ಗುರುದತ್ತ್ ಎನ್ ಉಪಸ್ಥಿತರಿದ್ದರು. ಪ್ರೇರಣಾ ಶ್ರೀನಿವಾಸ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net