ಗಾಂಧೀ ಪಾರ್ಕ್ ಶೀಘ್ರ ಅಭಿವೃದ್ಧಿ : ಶಾಸಕ ವೇದವ್ಯಾಸ ಕಾಮತ್ ಭರವಸೆ

gggggggg
Published on



ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅತ್ಯಂತ ಹಳೆಯ ಪಾರ್ಕ್ ಎಂಬ ಹೆಗ್ಗಳಿಕೆ ಹೊಂದಿರುವ ಗಾಂಧೀನಗರ ಪಾರ್ಕ್ ಶಿಥಿಲಾವಸ್ಥೆಯಲ್ಲಿದ್ದು, ಶಾಸಕ ವೇದವ್ಯಾಸ ಕಾಮತ್ ಪಾರ್ಕ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾಣದಿದ್ದ ಈ ಪಾರ್ಕ್‌ನಲ್ಲಿ ಮಳೆಗಾಲದಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ. ಇಲ್ಲಿ ದಿನನಿತ್ಯ ವಾಕಿಂಗ್ ಮಾಡುವ ಹಿರಿಯರು, ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸ್ಥಳೀಯರಿಂದ ಮಾಹಿತಿ ಪಡೆದ ಶಾಸಕರು ಸ್ಥಳ ವೀಕ್ಷಣೆ ನಡೆಸಿ ಪಾಲಿಕೆ ಇಂಜಿನಿಯರ್ ಸಮ್ಮುಖದಲ್ಲಿ ಪಾರ್ಕಿನ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ಯೋಜನೆಯ ರೂಪರೇಖೆ ಸಿದ್ಧಪಡಿಸಿ ಶೀಘ್ರ ಕಾಮಗಾರಿ ಆರಂಭಿಸಲು ಸೂಚನೆ ನೀಡಿದರು.
ಪಾರ್ಕ್ ಕಮಿಟಿ ಸದಸ್ಯರಾದ ನಂದಾ ಶೆಣೈ, ಅಜಿತ್ ರಾವ್, ವೆಂಕಟೇಶ್ ಆಚಾರ್, ಮೋಹನ್ ಆಚಾರ್, ಸ್ಥಳೀಯ ಮನಪಾ ಸದಸ್ಯೆ ಸಂಧ್ಯಾ ಆಚಾರ್, ಪವನ್ ಶೆಣೈ, ಆನಂದ ರೈ, ವಸಂತ್ ಪೂಜಾರಿ, ಭಾಸ್ಕರ ಚಂದ್ರ ಶೆಟ್ಟಿ, ವಸಂತ್, ದೇವರಾಜ, ತರುಣ್, ಧೀರಜ್,
ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net