

ಮಂಡ್ಯ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಆದರ್ಶ, ತತ್ವ, ಆಲೋಚನೆ ಇಂದಿಗೂ ಪ್ರಸ್ತುತವಾಗಿದೆ ಎಂದು ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಹೇಳಿದರು.
ತಾಲೂಕಿನ ಎಚ್.ಮಲ್ಲಿಗೆರೆಯ ಗಾಂಧಿಗ್ರಾಮದಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್, ಡಾ.ಜಿ.ಮಾದೇಗೌಡ ಪ್ರತಿಷ್ಠಾನ ಮತ್ತು ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸೀ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಾಂಧೀಜಿ ಅವರು ಹೈಟೆಕ್ ಇರಬೇಡ ಎಂದು ಹೇಳಿಲ್ಲ. ಆದರೆ ನಾವು ಮಾಡುವ ಕೆಲಸದಲ್ಲಿ ಸರಳತೆ, ಶ್ರದ್ಧೆ, ಶುದ್ಧವಾಗಿರಬೇಕು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಡೇ ವಿಥ್ ಮಹಾತ್ಮ ಗಾಂಧೀಜಿ ಎಂಬ ಭಾವನೆ ಮೂಡಿಸುವ ಚಿಂತನೆ ಈ ಗ್ರಾಮದಲ್ಲಿ ರೂಪಿತಗೊಳ್ಳಲಿದೆ. ಎಚ್.ಮಲ್ಲಿಗೆರೆ ಗ್ರಾಮಕ್ಕೆ ಮುಂದಿನ ನಾಲ್ಕು ವರ್ಷದಲ್ಲಿ 50 ಲಕ್ಷ ರೂ ಅನುದಾನ ನೀಡುತ್ತೇನೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಗಾಂಧೀಜಿ ಅವರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಮಾತನಾಡಿ, ಗಾಂಧೀಜಿ ಅವರ ಅಹಿಂಸವಾದ ಸಿದ್ಧಾಂತ ಜಗತ್ತಿನಾದಂತಹ ಪ್ರಭಾವ ಬೀರಿದೆ ಎಂದರು. ಗ್ರಾಮ ಪಂಚಾಯತಿ ಅಧ್ಯಕ್ಷ ಎಸ್.ಕೆ.ವಿನಯ್, ರಾಜಣ್ಣ, ಹರೀಶ್ ಮಾದಪ್ಪ, ರಮೇಶ್, ಮರೀಗೌಡ, ಡಾ.ಎಂ.ಎಸ್.ಮಹದೇವಸ್ವಾಮಿ, ಪುಟ್ಟಸ್ವಾಮಿ, ಡಾ.ಮಹೇಶ್ ಲೋನಿ, ಸಿ.ವಿ.ಮಲ್ಲಿಕಾರ್ಜುನ, ಎಚ್.ಎಂ.ಪ್ರತಿಮಾ ಇತರರಿದ್ದರು.