

ಮಾದಾಪುರ:
ಇಲ್ಲಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಡಾವಣೆ ಶ್ರೀ ವಿನಾಯಕ ಮಿತ್ರ ಮಂಡಳಿ ವತಿಯಿಂದ
ಗಾAಧಿ ಜಯಂತಿ ಮತ್ತು ಲಾಲ್ ಬಹಾದ್ದೂರ್ ಜಯಂತಿ ಪ್ರಯುಕ್ತ ಸೋಮವಾರ (ಅ.2) ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ನಂತರ ಬಡಾವಣೆಯ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೂ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಕಾಳು ಹೆಕ್ಕುವುದು, ಕಪ್ಪೆ ಓಟ, ಬಕ್ಕೆಟಿಗೆ ಬಾಲ್ ಹಾಕುವುದು, ನೀರು ತುಂಬಿಸುವ ಆಟ, ಪಾಸಿಂಗ್ ಬಾಲ್, ಗೋಣಿಚೀಲ ಓಟ, ಇಟ್ಟಿಗೆ ಹಿಡಿತ, ಸೂಜಿಗೆ ನೂಲು ಹಾಕುವುದು, ತೆಂಗಿನಕಾಯಿಗೆ ಕಲ್ಲು ಹೊಡೆಯುವುದು, ಬಕಾಸುರ ಸ್ಪರ್ಧೆ ಮತ್ತಿತರ ಸ್ಪರ್ಧೆಗಳು ನಡೆದವು.
ಕ್ರೀಡಾಧ್ಯಕ್ಷ ಸುಜನ್, ಸ್ಥಳೀಯರಾದ ಕೊಪ್ಪತಂಡ ಗಣೇಶ್, ಬಾಚಿನಾಡಂಡ ಗಾಂಧಿ, ಪೊನ್ನಾಂಬಲ ಹರೀಶ್, ವಿನೋದ್ ಮತ್ತಿತರರು ಈ ವೇಳೆ ಇದ್ದರು.