

ಹರಿಹರ: ದೇಶದಲ್ಲಿ ಸಾಮಾಜಿಕ, ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಅವುಗಳಿಂದ ಪಾರಾಗಲು ನಾವು ಗಾಂಧೀಜಿ ತೋರಿಸಿದ ಅಹಿಂಸೆಯ ದಾರಿಯಲ್ಲಿ ನಡೆಯಬೇಕೆಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಚ್.ಎ. ಭಿಕ್ಷಾವರ್ತಿಮಠ ಹೇಳಿದರು.
ನಗರದ ಶ್ರೀ ಶಕ್ತಿ ಹಿರಿಯ ನಾಗರೀಕರ ವಸತಿ ನಿಲಯದಲ್ಲಿ ಸೋಮವಾರ ಎಚ್.ಕೆ. ಕೊಟಗಿ ಕುಟುಂಬ ಆಯೋಜಿಸಿದ್ದ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಇವತ್ತಿನ ಭಾರತಕ್ಕೆ ಮತ್ತು ಜಗತ್ತಿಗೆ ಗಾಂಧೀಜಿಯ ಬದುಕು ಮತ್ತು ಚಿಂತನೆಗಳು ಅತ್ಯಂತ ಪ್ರಸ್ತುತ ಎಂದು.
ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಸಿ.ವಿ. ಪಾಟೀಲ್ ಮಾತನಾಡಿ, ಗಾಂಧಿಜೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಆದರ್ಶ ಸದಾ ಅನುಕರಣೀಯ ಎಂದರು.
ತಪೋವನ ಸಂಸ್ಥಾಪಕ ಅಧ್ಯಕ್ಷ ಡಾ. ಶಶಿಕುಮಾರ್ ಮೆಹರ‌್ವಾಡೆ ಮಾತನಾಡಿ, ಗಾಂಧೀಜಿ ಅವರು ಪ್ರಕೃತಿ ಚಿಕಿತ್ಸೆಗೆ ಆದ್ಯತೆ ನೀಡಿದ್ದರು ಎಂದರು.
ನಗರಸಭೆ ಅಧ್ಯಕ್ಷೆ ನಿಂಬಕ್ಕ ಚಂದಾಪುರ ಕಾರ್ಯಕ್ರಮ ಉದ್ಘಾಟಿಸಿದರು. ಎಸ್.ಎಚ್. ಹೂಗಾರ್, ನಗರಸಭೆ ಮಾಜಿ ಅಧ್ಯಕ್ಷ ಬಿ. ರೇವಣಸಿದ್ದಪ್ಪ, ಸದಸ್ಯ ಆಟೋ ಹನುಮಂತಪ್ಪ, ಸಿ.ಎನ್. ಹುಲಿಗೇಶ್, ಬಿ. ರೇವಣಸಿದ್ದಪ್ಪ, ಜೆ. ಕಲೀಮ್ ಬಾಷಾ, ಕೆ.ಬಿ. ರಾಜಶೇಖರ್, ವೈ. ಕೃಷ್ಣಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಸಪ್ಪ, ಜಿ.ಕೆ. ಪಂಚಾಕ್ಷರಿ, ಎಚ್. ಸುಧಾಕರ್ ಮಾತನಾಡಿದರು.
ಚಂದ್ರಮ್ಮ ಕೆ. ಕೊಟಗಿ ಅಧ್ಯಕ್ಷತೆ ವಹಿಸಿದರು, ಎಲ್. ಬಸಣ್ಣ ಚಿಕ್ಕಬಿದರಿ, ಚಂದ್ರಶೇಖರಪ್ಪ ಕೆ.ಎನ್. ಹಳ್ಳಿ, ಪ್ರಕಾಶ್ ಕೊಳೂರು, ಶೇಖರ್‌ಗೌಡ ಪಾಟೀಲ್, ಎಚ್.ಸಿ. ಕೀರ್ತಿಕುಮಾರ್, ಸುಬ್ರಹ್ಮಣ್ಯ ನಾಡಿಗೇರ್, ಕೆ. ಪಂಚಾಕ್ಷರಿ, ಎಚ್. ಸುಧಾಕರ್, ಚಿದಾನಂದ ಕೆಂಚಿಕೆರೆ ಮತ್ತಿತರರಿದ್ದರು.