

ಕೊಪ್ಪಳ: ಗಾಂಧಿ ಜಯಂತಿ ಅಂಗವಾಗಿ ಶಿಕ್ಷಕರ ಕಲಾ ಸಂಘ ಹಾಗೂ ಗಾಂಧಿ ಬಳಗ ಬುಧವಾರ ಕಾಮನೂರಿಗೆ ಪಾದಯಾತ್ರೆ ನಡೆಸಿತು. ಕೊಪ್ಪಳದ ಅಶೋಕ ವೃತ್ತದಿಂದ ಆರಂಭವಾದ ಯಾತ್ರೆ 16 ಕಿ.ಮೀ. ಸಾಗಿ ಕಾಮನೂರು ಸೇರಿತು.
ಗ್ರಾಮಸ್ಥರು ಹೂ ಮಳೆಗೆರೆದು ಯಾತ್ರಿಗಳನ್ನು ಸ್ವಾಗತಿಸಿದರು. ಶಾಲಾ ಮಕ್ಕಳು ಸಾಥ್ ನೀಡಿದರು. ಗಾಂಧಿ ಬಳಗದ ಮುಖ್ಯಸ್ಥ ಬಸವರಾಜ ಸವಡಿ ಮಾತನಾಡಿ, ಗಾಂಧೀಜಿ ಸರಳ ಜೀವನ ನಡೆಸಿದರು. ಅವರ ವಿಚಾರಗಳನ್ನು ಕಾಮನೂರು ಜನ ಜೀವಂತ ಇಟ್ಟಿದ್ದಾರೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಪ್ರಭುರಾಜ ನಾಯಕ ವಿಶೇಷ ಉಪನ್ಯಾಸ ನೀಡಿದರು. ಸಂಸದ ರಾಜಶೇಖರ ಹಿಟ್ನಾಳ ದೂರವಾಣಿ ಮೂಲಕ ಮಾತನಾಡಿ, ಕಾಮನೂರು ಗ್ರಾಮವನ್ನು ಸಂಸದರ ಆದರ್ಶ ಗ್ರಾಮವಾಗಿ ದತ್ತು ಸ್ವೀಕರಿಸಿ ಅಭಿವೃದ್ಧಿಪಡಿಸುವ ಭರವಸೆ ನೀಡಿದರು.
ರಾಜ್ಯ ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನವರ ಗ್ರಾಮ ಅಭಿವೃದ್ಧಿಗೆ ಸಹಕರಾ ನೀಡುವುದಾಗಿ ತಿಳಿಸಿದರು.
ಪಾದಯಾತ್ರಿಗಳಾದ ಫಕೀರಪ್ಪ ಜಂತ್ಲಿ, ಹನುಮಪ್ಪ ಐರಾಣಿ, ಮೈಲಾರಪ್ಪ ಐರಾಣಿ, ಗುಡದಪ್ಪ ಯಮನಪ್ಪ, ಸಣ್ಣನಿಂಗಪ್ಪ ಐರಾಣಿ, ದೇವಪ್ಪ ಮರಿಯಪ್ಪ, ಬಸಪ್ಪ ವಕ್ಕಲಕುಂಟಿ, ಮಲ್ಲಪ್ಪ ಯಲ್ಲಪ್ಪ, ಹನುಮೇಶ ಕುಂಭಾರ, ದ್ಯಾಮಣ್ಣ, ಕುಬೇರಪ್ಪ ತುಬಾಕಿ, ಮಾರುತಿ ಹೊಸಮನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮ, ಉಪಾಧ್ಯಕ್ಷೆ ಪಾರಮ್ಮ ಭೋವಿ, ಸಿದ್ದಮ್ಮ ಬಂಗಾರಿ, ಭೀಮವ್ವ ತಾವರಗೇರಾ, ಬಾಳಪ್ಪ ಬೂದಗುಂಪಿ, ಗಾಂಧಿ ಬಳಗದ ರಾಮಣ್ಣ ಶ್ಯಾವಿ, ಆನಂದತೀರ್ಥ ಪ್ಯಾಟಿ, ಪ್ರಾಣೇಶ ಪೂಜಾರ, ಸಿದ್ಧಲಿಂಗಪ್ಪ ಕೊಟ್ನೇಕಲ್, ಶಿವಪ್ಪ ಜೋಗಿನ, ನಾಗರಾಜ ಡೊಳ್ಳಿನ ಇತರರಿದ್ದರು.