

ಕೊಪ್ಪಳ: ಮಹಾತ್ಮ ಗಾಂಧಿ ಜನ್ಮ ದಿನದಂದು ನಾವೆಲ್ಲ ಅಂತರಂಗ&ಬಹಿರಂಗ ಶುದ್ಧ ಸಂಕಲ್ಪ ಮಾಡಬೇಕಿದೆ ಎಂದು ಜಿಲ್ಲಾ ನ್ಯಾಯಾಧೀಶ ಚಂದ್ರಶೇಖರ ಸಿ. ಸಲಹೆ ನೀಡಿದರು.
ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸುತ್ತಲ ಪರಿಸರ ಸ್ವಚ್ಛವಾಗಿರಬೇಕು. ಸ್ವಚ್ಛತೆ ಕೇಲವ ಕಾರ್ಯಕ್ರಮಕ್ಕೆ ಸೀಮಿತವಾಗದಿರಲಿ. ವಾಸ್ತವಿಕವಾಗಿರಲಿ. ನಮ್ಮಿಂದಲೇ ಎಲ್ಲ ಆರಂಭವಾಗಲಿ. ಅಂದಾಗ ಗಾಂಧಿ ಕನಸು ನನಸಾಗುತ್ತದೆ. ಅದನ್ನು ಕಾರ್ಯರೂಪಕ್ಕೆ ತರೋಣ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ ಮಾತನಾಡಿ, ಜಗತ್ತು ಕಂಡ ಶ್ರೇಷ್ಠರಲ್ಲಿ ಗಾಂಧೀಜಿ ಒಬ್ಬರು. ಅವರ ಜನ್ಮ ದಿನದಂದು ಸ್ವಚ್ಛತೆ ಪ್ರಜ್ಞೆ ಮೂಡಿಸುತ್ತಿರುವುದು ಶ್ಲಾನೀಯ. ನಾವು ಮಾತನಾಡುವುದಕ್ಕಿಂತ ನಮ್ಮ ಕೆಲಸ ಮಾತನಾಡಬೇಕು. ಪ್ರತಿಯೊಬ್ಬ ಭಾರತೀಯ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಇದರಿಂದ ದೇಶದ ಚಿತ್ರಣವೇ ಬದಲಾಗಲಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಪ್ಲಾಸ್ಟಿಕ್ಗೆ ಪರ್ಯಾಯವಾಗಿ ಬಟ್ಟೆ ಚೀಲಗಳನ್ನು ವಿತರಿಸಲಾಯಿತು. ಶಿಕ್ಷಕ ಮಾರುತಿ ಸ್ವಚ್ಛತೆ ಪ್ರತಿಜ್ಞಾ ವಿಧಿ ಬೋಧಿಸಿದರು. ನ್ಯಾಯಾಧೀಶರಾದ ಕುಮಾರ ಡಿ.ಕೆ., ಸರಸ್ವತಿ ದೇವಿ, ಮಹಾಂತೇಶ ಎಸ್.ದರಗದ, ಮಲಕಾರಿ ರಾಮಪ್ಪ ಒಡೆಯರರ, ಭಾಗ್ಯಲಕ್ಷಿ$್ಮ, ಆದಿತ್ಯ ಕುಮಾರ ಎಚ್.ಆರ್., ಗ್ರಾಪಂ ಅಧ್ಯೆ ಕರಿಯಮ್ಮ ಉಪ್ಪಾರ, ಉಪಾಧ್ಯಕ್ಷ ದುರ್ಗಪ್ಪ ಡಂಬರ, ತಾಪಮ ಇಒ ದುಂಡಪ್ಪ ತುರಾದಿ, ತಹಸೀಲ್ದಾರ್ ವಿಠ್ಠಲ ಚೌಗಲಾ, ಪಿಡಿಒ ಪರಮೇಶ್ವರಯ್ಯ ತೆಲಗಡೆಮಠ ಇತರರಿದ್ದರು.