ಸಮರ್ಥ ನಾಯಕತ್ವ ದೇಶದ ಅಭಿವೃದ್ಧಿಗೆ ದಿಕ್ಸೂಚಿ: ಯಶ್​ ಪಾಲ್​ ಸುವರ್ಣ

udp-3-yashpal
Published on

ಉಡುಪಿ: ದೇಶದ ಅಭಿವೃದ್ಧಿ ಮತ್ತು ಪ್ರಗತಿಪರ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ದಕ್ಷ ನಾಯಕತ್ವ ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ದೇಶದ ನೇತೃತ್ವ ವಹಿಸಿದ ನಂತರ ಆಶಾದಾಯಕ ಗುರುತರ ಬದಲಾವಣೆಗಳು ಗೋಚರಿಸಿದೆ. ಸ್ವಚ್ಛತೆಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳು ದೇಶದ ಜನ ಮನದಲ್ಲಿ ಹಾಸು ಹೊಕ್ಕಾಗಿ ನೆಲೆ ನಿಂತಿವೆ ಎಂದು ಶಾಸಕ ಯಶ್ಪಾಲ್​ ಸುವರ್ಣ ಹೇಳಿದರು.

ಸೋಮವಾರ ಬಿಜೆಪಿ ಉಡುಪಿ ನಗರ ಆಶ್ರಯದಲ್ಲಿ ಗಾಂಧೀ ಜಯಂತಿ ಹಾಗೂ ಲಾಲ್​ ಬಹದ್ದೂರ್​ ಶಾಸ್ತ್ರಿ ಜನ್ಮದಿನಾಚರಣೆಯ ಅಂಗವಾಗಿ ಉಡುಪಿ ನಗರ ಸಭಾ ವ್ಯಾಪ್ತಿಯ 35 ವಾರ್ಡ್​ ಹಾಗೂ 6 ಪಂಚಾಯಿತಿಗಳಲ್ಲಿ ಸುಮಾರು 300 ಕ್ಕೂ ಹೆಚ್ಚು ಬಸ್​ ಸ್ಟ್ಯಾಂಡ್​ ಗಳಲ್ಲಿ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಗರಾಧ್ಯಕ್ಷ ಮಹೇಶ್​ ಠಾಕೂರ್​ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ. ರಘುಪತಿ ಭಟ್​, ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್​ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಬಿ.ಜೆ.ಪಿ ವಕ್ತಾರ ಕೆ. ರಾಘವೇಂದ್ರ ಕಿಣಿ, ಕಡಿಯಾಳಿ ಮಹಾಶಕ್ತಿ ಕೇಂದ್ರದ ಸಂಚಾಲಕ ಹರೀಶ್​ ರಾಮ್​ ಬನ್ನಂಜೆ, ನಗರ ಸಭಾ ಸದಸ್ಯರಾದ ಟಿ.ಜಿ.ಹೆಗ್ಡೆ, ಗಿರೀಶ್​ ಅಂಚನ್​, ಸವಿತಾ ಹರೀಶ್​ ರಾಮ್​ ಭಂಡಾರಿ , ಮಾನಸ ಸಿ ಪೈ, ಕಾರ್ಯಕ್ರಮ ಸಂಚಾಲಕ ವಿಜಯ ಕೊಡವೂರು ಹಾಗೂ ನಗರ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಣಿಪಾಲ್​ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net