ಗಾಂಧಿ ಗ್ರಾಮಕ್ಕೆ ಪುರಸ್ಕಾರ ಆಯ್ಕೆ: ಪ್ರಶಸ್ತಿ ಪಡೆದ ಮಂಡ್ಯ ಜಿಲ್ಲೆಯ ಗ್ರಾಮ ಪಂಚಾಯಿತಿಗಳು ಯಾವುದು ಗೊತ್ತಾ?

gandhi grama puraskara
Published on

ಮಂಡ್ಯ: 2022-23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ

ಮಂಡ್ಯ ತಾಲೂಕಿನಲ್ಲಿ ಹೊಡಾಘಟ್ಟ, ಕೆ.ಆರ್.ಪೇಟೆಯಲ್ಲಿ ಬಳ್ಳೇಕೆರೆ, ಮದ್ದೂರಿನಲ್ಲಿ ಕೆ.ಎಂ.ದೊಡ್ಡಿ, ಮಳವಳ್ಳಿಯಲ್ಲಿ ಬಿ.ಜಿ.ಪುರ, ನಾಗಮಂಗಲದಲ್ಲಿ ಹುಲಿಕೆರೆ, ಪಾಂಡವಪುರದಲ್ಲಿ ಮೇಲುಕೋಟೆ ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಟಿ.ಎಂ.ಹೊಸೂರು ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಲಾಗಿದೆ. ಆ.2ರಂದು ಬೆಳಗ್ಗೆ 10ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಒ ಭಾಗವಹಿಸುವಂತೆ ಪಂಚಾಯತ್ ರಾಜ್ ಆಯುಕ್ತಾಲಯ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net