ಅಧಿಕಾರ ಇಲ್ಲದಿದ್ದರೂ ಸಂಘಟನೆಗೆ ಶ್ರಮಿಸುವುದು ಬಿಜೆಪಿ

web 4
Published on

ಶೃಂಗೇರಿ: ಕೆಲ ಪಕ್ಷಗಳು ಅಧಿಕಾರದಲ್ಲಿ ಇದ್ದಾಗ ಮಾತ್ರ ಸಂಘಟನೆ ಕಡೆ ಗಮನ ನೀಡುತ್ತವೆೆ. ಆದರೆ ಅಧಿಕಾರ ಇಲ್ಲದ ಸಂದರ್ಭ ಬಿಜೆಪಿ ಸಂಘಟನೆಗೆ ನಿರಂತರ ಶ್ರಮಿಸುತ್ತದೆ. ಶ್ಯಾಮಪ್ರಸಾದ್ ಮುಖರ್ಜಿ ಅಧಿಕಾರ ತ್ಯಜಿಸಿ ದೇಶಕ್ಕಾಗಿ ಹೋರಾಟ ಮಾಡಿದವರು. ಅಂತಹ ಮಹನೀಯರು ಕಂಡ ಕನಸು ಪ್ರಸ್ತುತ ನನಸಾಗಿದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ತಿಳಿಸಿದರು.

ಪಟ್ಟಣದ ಜ್ಞಾನಭಾರತೀ ವಿದ್ಯಾಕೇಂದ್ರದಲ್ಲಿ ಶುಕ್ರವಾರ ತಾಲೂಕು ಬಿಜೆಪಿ ಮಂಡಲ ಆಯೋಜಿಸಿದ್ದ ಪ್ರಶಿಕ್ಷಣ ವರ್ಗಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಧಿಕಾರಕ್ಕಾಗಿ ಬಿಜೆಪಿ ಎಂದಿಗೂ ಹೋರಾಟ ಮಾಡಿಲ್ಲ. ಜನಸಂಘದ ಸಂಸ್ಥಾಪಕರಾದ ಶ್ಯಾಮ್್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯ ಮುಂತಾದವರ ಶ್ರಮದಿಂದ ಪಕ್ಷದ ಮುಖಂಡರು ದೇಶವನ್ನು ಪ್ರಾಮಾಣಿಕವಾಗಿ ಆಳುತ್ತಿದ್ದಾರೆ ಎಂದರು.

ಕಾಶ್ಮೀರದಲ್ಲಿ ಕಲಂ 370 ರದ್ದು, ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಇಂತಹ ಹಲವು ಅದ್ಭುತ ಕಾರ್ಯ ನಡೆದಿದೆ. ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಬೇಕಿದೆ. ಕಾಂಗ್ರೆಸ್​ನಲ್ಲಿ ಗಾಂಧಿ ಎಂಬ ಪದ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್​ಗೆ ಉಳಿಗಾಲವಿಲ್ಲ ಎಂದು ಸ್ವತಃ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಆ ಪಕ್ಷದವರಿಗೆ ಕಾಂಗ್ರೆಸ್ ಎಂದರೆ ಏನು ಎಂದು ಹೇಳುವರು ಚಲಾವಣೆ ಕಳೆದುಕೊಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಪ್ರಶಿಕ್ಷಣದಲ್ಲಿ ಭಾಗವಹಿಸಿ ಸಮುದಾಯ ಹಾಗೂ ಪಕ್ಷದ ಏಳಿಗೆಗೆ ದುಡಿಯಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net