ಸಿದ್ಧಾರೂಢಸ್ವಾಮಿ ಮಠಕ್ಕೆ ಗಾಂಧಿಭವನದ ನಿರ್ದೇಶಕರ ಭೇಟಿ

h11-siddarudha
Published on

ಹುಬ್ಬಳ್ಳಿ: ಬೆಂಗಳೂರು ಗಾಂಧಿಭವನದ ನಿರ್ದೇಶಕ ಜಿ.ಬಿ. ಶಿವರಾಜ ಹಾಗೂ ಅಂತಾರಾಷ್ಟ್ರೀಯ ನೀರಿನ ಗಾಂಧಿ ಖ್ಯಾತಿಯ ರಾಜೇಂದ್ರಸಿಂಗ್‌ಜಿ ಅವರು ಇಲ್ಲಿಯ ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ಶನಿವಾರ ಭೇಟಿ ನೀಡಿ ಉಭಯ ಶ್ರೀಗಳ ಗದ್ದುಗೆ ದರ್ಶನಾಶೀರ್ವಾದ ಪಡೆದರು.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿ ಭಕ್ತರ ಮೇಲ್ಮನೆ ಸಭಾಧ್ಯಕ್ಷ ಡಿ.ಆರ್. ಪಾಟೀಲ ಅವರು ಉಭಯರನ್ನು ಗೌರವಿಸಿದರು.

ಟ್ರಸ್ಟ ಕಮಿಟಿಯ ಧರ್ಮದರ್ಶಿಗಳಾದ ಡಾ. ಗೋವಿಂದ ಮಣ್ಣೂರ, ಮಂಜುನಾಥ ಮುನವಳ್ಳಿ, ಶ್ರೀಮಠದ ವ್ಯವಸ್ಥಾಪಕ ಈರಣ್ಣ ತುಪ್ಪದ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net