

ಮಡಿಕೇರಿ:
ರಾಷ್ಟçಪಿತ ಮಹಾತ್ಮಗಾಂಧೀಜೀ ಹುತಾತ್ಮರಾದ ದಿನದ ಅಂಗವಾಗಿ ಸುಂಟಿಕೊಪ್ಪ ಮಹಾತ್ಮಾಗಾಂಧಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಮಹಾತ್ಮಾ ಗಾಂಧಿ ಪುಣ್ಯ ಸ್ಮರಣೆ ಮತ್ತು ಹುತಾತ್ಮ ದಿನವನ್ನು ಗಾಂಧೀಜಿ ಕೊಡಗಿಗೆ ಭೇಟಿ ನೀಡಿದ್ದ ಮನೆ ಗುಂಡುಕುಟ್ಟಿಯ ಸ್ವರ್ಣಾಲಯದ ಮುಂಭಾಗದಲ್ಲಿ ಗುರುವಾರ ಆಚರಿಸಲಾಯಿತು.
ಮಹಾತ್ಮಾ ಗಾಂಧಿ ಮೆಮೋರಿಯಲ್ ಟ್ರಸ್ಟ್ನ ಟ್ರಸ್ಟಿಗಳು ಮಹಾತ್ಮಾ ಗಾಂಧೀಜಿ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಮಾತನಾಡಿದ ಕಾರ್ಯದರ್ಶಿ ಡೆನಿಸ್ ಡಿಸೋಜಾ ಮಹಾತ್ಮ ಗಾಂಧಿ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರ ಶಾಂತಿ ಮಾರ್ಗದ ಹೋರಾಟ ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಗಾಂಧೀಜಿಯವರ ವಿಚಾರಧಾರೆಗಳ ಬಗ್ಗೆ ಅಧ್ಯಯನ ನಡೆಸಬೇಕು ಪ್ರತಿಯೊಬ್ಬ ಯುವ ಪೀಳಿಗೆ ಅವರ ವಿಚಾರಧಾರೆಯ ಪುಸ್ತಕಗಳನ್ನು ಅಧ್ಯಯನ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ನ ಸಂಚಾಲಕ ಎಂ.ಇ. ಮೊಹಿದ್ದೀನ್, ಖಜಾಂಚಿ ರಮೇಶ್ ಪಿಳ್ಳೆ, ಟ್ರಸ್ಟಿ ಕರ್ನಲ್ ಕುಮಾರ್ ಇದ್ದರು.