ಮಧುರ ಕಂಠ ಸಿರಿಗೆ ಮತ್ತೊಂದು ಹೆಸರೇ ಎಸ್.ಪಿ.ಬಿ ; ಗಂಧದಗುಡಿಯಲಿ ಮಿಂದ ಕೋಗಿಲೆ

FB_IMG_1686756718854.jpg
Published on

ಬೆಳಗಾವಿ: ಇಲ್ಲಿನ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ ಹಾಗೂ ಬೆಳ್ಳಿಚುಕ್ಕಿ ಸಾಂಸ್ಕೃತಿಕ ಅಕಾಡೆಮಿ ಸಹಯೋಗದಲ್ಲಿ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಜನ್ಮದಿನೋತ್ಸವ ಅಂಗವಾಗಿ ಮಂಗಳವಾರ ‘ಗಂಧದ ಗುಡಿಯಲ್ಲಿ ಮಿಂದ ಕೋಗಿಲೆಗಳು’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಾಹಿತಿ ಯ.ರು.ಪಾಟೀಲ, ‘ಮಧುರ ಕಂಠಸಿರಿಗೆ ಇನ್ನೊಂದು ಹೆಸರೇ ಬಾಲಸುಬ್ರಹ್ಮಣ್ಯಂ. ದ್ರಾವಿಡ ಪಂಚ ಭಾಷೆಗಳಲ್ಲಿ 40 ಸಾವಿರ ಹಾಡುಗಳನ್ನು ಹಾಡಿದ ಶ್ರೇಯ ಅವರಿಗೆ ಸಲ್ಲುತ್ತದೆ’ ಎಂದರು.

ಕ.ಸಾ.ಪ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅಧ್ಯಕ್ಷತೆ ವಹಿಸಿದ್ದರು. ಎಂ.ವೈ.ಮೆಣಸಿನಕಾಯಿ, ಡಾ.ಸರಜೂ ಕಾಟ್ಕರ್, ರಾಜಶೇಖರ ಪಾಟೀಲ, ರವಿ ಭಜಂತ್ರಿ ಉಪಸ್ಥಿತರಿದ್ದರು. ಅಕಾಡೆಮಿ ಅಧ್ಯಕ್ಷೆ ರಾಜೇಶ್ವರಿ ಹೀರೆಮಠ ಸ್ವಾಗತಿಸಿದರು. ಪ್ರತಿಭಾ ಕಳ್ಳಿಮಠ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net