ಗಾಣಧಾಳು ಡೇರಿಗೆ 3.40 ಲಕ್ಷ ರೂ. ಲಾಭ

FotoJet
Published on

ಹುಳಿಯಾರು : ಗಾಣಧಾಳು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 3.40 ಲಕ್ಷ ಲಾಭ ಬಂದಿರುವುದಾಗಿ ಸಂಘದ ಅಧ್ಯಕ್ಷ ಜಿ.ವಿ.ನವೀನ್​ ಕುಮಾರ್​ ತಿಳಿಸಿದರು.

ಹುಳಿಯಾರು ಹೋಬಳಿ ಗಾಣಧಾಳು ಹಾಲು ಉತ್ಪಾದಕರ ಸಹಕಾರ ಸಂಘದ 2024&-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಉತ್ಪಾದಕರು, ಕಾರ್ಯಕಾರಿ ಮಂಡಳಿ ಹಾಗೂ ನೌಕರ ವರ್ಗದವರ ಪರಿಶ್ರಮದಿಂದ ಡೇರಿ ಲಾಭಗಳಿಸಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಲಾಭ ಗಳಿಸಲು ಎಲ್ಲರೂ ಸಹಕಾರ ನೀಡುವಂತೆ ತಿಳಿಸಿದರು.

ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಬಿ.ಎನ್​.ಶಿವಪ್ರಕಾಶ್​ ಮಾತನಾಡಿ, ಒಕ್ಕೂಟದಿಂದ ರಾಸು ವಿಮೆ, ಹಾಲು ಕರೆಯುವ, ಮೇವು ಕತ್ತರಿಸುವ ಯಂತ್ರ, ರಬ್ಬರ್​ ಮ್ಯಾಟ್​ಗಳು ಸಬ್ಸಿಡಿ ದರದಲ್ಲಿ ದೊರೆಯುತ್ತಿದ್ದು, ಇದನ್ನು ಸದುಪಯೋಗಪಡಿಸುವಂತೆ ತಿಳಿಸಿದರು.

ಆಡಳಿತ ಮಂಡಳಿ ನಿರ್ದೇಶಕರಾದ ಜಿ.ಡಿ.ವರದರಾಜು, ಜಿ.ಕೆ.ಶಶಿಕಂಠ, ಜಿ.ಡಿ.ರಂಗಸ್ವಾಮಿ, ಜಿ.ಕೆ.ಯರಗುಂಟಪ್ಪ, ಜಿ.ಎನ್​.ಮಲ್ಲಿಕಾರ್ಜುನಯ್ಯ, ನಾಗರಾಜು, ಮಂಜುನಾಥ, ಜಿ.ಆರ್​.ರಂಗಧಾಮಯ್ಯ, ತೊಳಸಮ್ಮ, ಹೇಮಾವತಿ, ಕಾರ್ಯದರ್ಶಿ ಜಿ.ಎಂ.ಚಂದ್ರಶೇಖರಯ್ಯ, ಹಾಲು ಪರೀಕ್ಷಕ ಜಿ.ಆರ್​.ಮಂಜುನಾಥ ಹಾಗೂ ಸಂಘದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net