ಗಂಡಬೊಮ್ಮನಹಳ್ಳಿಯಲ್ಲಿ ಗೋಶಾಲೆ ಆರಂಭ ಶೀಘ್ರ

KH Hallai Ac
ಗಂಡಬೊಮ್ಮನಹಳ್ಳಿ ಗ್ರಾಮದಲ್ಲಿ ಗೋಶಾಲೆ ನಿರ್ಮಾಣದ ಸ್ಥಳವನ್ನು ಸಹಾಯಕ ಅಯುಕ್ತ ನೋಂಗ್ಜಾಯ್ ಮೊಹಮದ್ ಅಲಿ ಅಕ್ರಮ್ ಶಾ ಬುಧವಾರ ಪರಿಶೀಲಿಸಿದರು. ತಹಸೀಲ್ದಾರ್ ರಾಜು ಪಿರಂಗಿ, ತಾಪಂ ಇಒ ರವಿಕುಮಾರ್, ಪಿಡಿಒ ರಾಮಕೃಷ್ಣ ಇದ್ದರು.
Published on

ಕಾನಹೊಸಹಳ್ಳಿ: ಬರ ಕಾರಣ ಜಾನುವಾರುಗಳಿಗೆ ಮೇವು ಪೂರೈಸಲು ಸರ್ಕಾರ ಕ್ರಮಕೈಗೊಂಡಿದ್ದು, ಗಂಡಬೊಮ್ಮನಹಳ್ಳಿ ಕೆರೆ ಹಿಂಬದಿಯ ಖಾಲಿ ಪ್ರದೇಶದಲ್ಲಿ ಗೋಶಾಲೆ ಆರಂಭಿಸಲಾಗುವುದು ಎಂದು ಹೊಸಪೇಟೆ ಸಹಾಯಕ ಅಯುಕ್ತ ನೋಂಗ್ಜಾಯ್ ಮೊಹಮದ್ ಅಲಿ ಅಕ್ರಮ್ ಶಾ ಹೇಳಿದರು.

ಗಂಡಬೊಮ್ಮನಹಳ್ಳಿಗೆ ಬುಧವಾರ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಮಾತನಾಡಿದರು. ಗಂಡಬೊಮ್ಮನಹಳ್ಳಿಯಲ್ಲಿ ಈ ಹಿಂದೆ ಗೋ ಶಾಲೆ ಅರಂಭಿಸಲಾಗಿತ್ತುು. ಈಗ ಕೆರೆ ಬಳಿ ಗೋಶಾಲೆ ಆರಂಭಿಸಲಾಗುವುದು. ಅಲ್ಲದೆ, ಕೆರೆಯಲ್ಲಿ ನೀರು ಹಾಗೂ ಎರಡು ಕೊಳವೆಬಾವಿ ಇರುವುದರಿಂದ ಜಾನುವಾರುಗಳಿಗೆ ಕುಡಿವ ನೀರಿನ ಸಮಸ್ಯೆ ಇರುವುದಿಲ್ಲ. ಶಾಶ್ವತ ಶೆಡ್, ನೆರಳಿನ ವ್ಯವಸ್ಥೆ ಇದೆ. ತಾತ್ಕಾಲಿಕ ಶೆಡ್‌ಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಬೇಗ ಪೂರ್ಣಗೊಳಿಸಲು ಸೂಚಿಸಿರುವೆ. ಈಗಾಗಲೇ ಮೂರು ಲೋಡ್ ಭತ್ತದ ಮೇವು ಬಂದಿದ್ದು, ಅಗತ್ಯವಿದ್ದರೆ ಇನ್ನಷ್ಟು ಖರೀದಿಸಿ ಗೋಶಾಲೆ ಆರಂಭಿಸಲಾಗುವುದು ಎಂದು ತಿಳಿಸಿದರು.

ತಹಸೀಲ್ದಾರ್ ರಾಜು ಪಿರಂಗಿ, ತಾಪಂ ಇಒ ರವಿಕುಮಾರ್, ಪಶುವೈದ್ಯ ಸಹಾಯಕ ನಿರ್ದೇಶಕ ಡಾ.ಲೋಹಿತಕುಮಾರ್, ಗುಡೇಕೋಟೆ ಕಂದಾಯ ನಿರೀಕ್ಷಕ ಚೌಡಪ್ಪ, ಗ್ರಾಪಂ ಪಿಡಿಒ ಸಿ.ರಾಮಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net