ಗಾನಯೋಗಿ ಪಂಚಾಕ್ಷರಿ ಪುಟ್ಟರಾಜ ಸಂಗೀತೋತ್ಸವ

Music
Published on

ಮೈಸೂರು: ಸ್ವರಸಂಕುಲ ಸಂಗೀತ ಸಭಾ ಮಾ.27 ರಂದು ಸಂಜೆ 5.30ಕ್ಕೆ ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ ಗಾನಯೋಗಿ ಪಂಚಾಕ್ಷರಿ ಪುಟ್ಟರಾಜ ಸಂಗೀತೋತ್ಸವ ಏರ್ಪಡಿಸಿದೆ. ಈ ಉತ್ಸವದಲ್ಲಿ ಮೊದಲಿಗೆ ಪಂಡಿತ್ ಸಚಿನ್ ಹಂಪೆಮನೆ ಅವರು ಸರೋದ್ ವಾದನ ನುಡಿಸಲಿದ್ದಾರೆ.

ಅವರಿಗೆ ಭೀಮಾ ಶಂಕರ್ ಬಿದನೂರ್(ತಬಲ) ಸಹಕಾರ ನೀಡಲಿದ್ದಾರೆ. ನಂತರ ಹೆಸರಾಂತ ಗಾಯಕ ಪಂ. ಅವಿನಾಶ್ ಕುಮಾರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡಲಿದ್ದು, ಪಂಡಿತ್ ಮೇಘಶ್ಯಾಮ್ ಕೇಶವ್(ತಬಲ) ಮತ್ತು ಪಂಡಿತ್ ವೀರಭದ್ರಯ್ಯ ಹಿರೇಮಠ್ (ಹಾರ್ಮೋನಿಯಂ) ಸಹಕಾರ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net