

ಮೈಸೂರು: ಹರಿದಾಸ ಸಂಗೀತ ಸಾಹಿತೋತ್ಸವ ಸಮಿತಿ ವತಿಯಿಂದ ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ನಡೆಯುತ್ತಿರುವ ಮಧ್ವ-ಪುರಂದರ ನಮನ ‘ಸುಮರ್ಧವ- ವಿಜಯ ಎಕ್ಸ್‌ಪ್ರೆಸ್’ ಗಾನಸಿರಿ ವೇದಾಂತ ಲಹರಿ ಭಾಗ-11 ಕಾರ್ಯಕ್ರಮ ಫೆ.25 ವರೆಗೆ ನಡೆಯಲಿದೆ.
ಪ್ರತಿದಿನ ಸಂಜೆ 5 ರಿಂದ 8.30 ರವರೆಗೆ ಪ್ರಸಿದ್ಧ ವಿದ್ವಾಂಸರಿಂದ ವಿನೂತನ ರೀತಿಯಲ್ಲಿ ವಿಶ್ಲೇಷಣೆ(ಪಾಜಕ ಕ್ಷೇತ್ರದಿಂದ-ಬದರಿನಾರಾಯಣ ಸನ್ನಿಧಾನ), ಪ್ರಖ್ಯಾತ ಗಾಯಕರಿಂದ ವಿಶಿಷ್ಟವಾದ ಕೀರ್ತನೆಗಳ ಗಾಯನ ಹಾಗೂ ಯುವ ಪ್ರತಿಭಾವಂತ ವಿದ್ವಾಂಸರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಪ್ರತಿ ದಿನ ಸಂಜೆ 5 ರಿಂದ 5.30ರ ವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. 23 ರಂದು ಪಂ.ಎಸ್.ಕೆ.ಕೃಷ್ಣಾಚಾರ್ಯ ಅವರಿಂದ ‘ಸುಮಧ್ವವಿಜಯ 11 ಮತ್ತು 12ನೇ ಸರ್ಗಗಳ ವಿಶ್ಲೇಷಣೆ’ ಹಾಗೂ ಕಲಾಶ್ರೀ ಡಾ.ಮುದ್ದುಮೋಹನ್ ಅವರಿಂದ ಗಾಯನ, 24 ರಂದು ಪಂ.ಪುರಂದರಾಚಾರ್ಯ ಹಯಗ್ರೀವ ಅವರಿಂದ ‘ಸುಮಧ್ವವಿಜಯ 13 ಮತ್ತು 14ನೇ ಸರ್ಗಗಳ ವಿಶ್ಲೇಷಣೆ’ ಹಾಗೂ ವಿದ್ವಾನ್ ರಾಯಚೂರು ಶೇಷಗಿರಿದಾಸ್ ಅವರಿಂದ ಗಾಯನ, 25 ರಂದು ಪಂ.ಭೀಮಸೇನಾಚಾರ್ಯ ಆತನೂರು ಅವರಿಂದ ‘ಸುಮಧ್ವವಿಜಯ 15 ಮತ್ತು 16 ನೇ ಸರ್ಗಗಳ ವಿಶ್ಲೇಷಣೆ ಹಾಗೂ ವಿದ್ವಾನ್ ಅನಂತರಾಜ್ ಮಿಸ್ತ್ರಿ ಅವರಿಂದ ಗಾಯನ ನಡೆಯಲಿದೆ.