ಗೂಳೂರು ಗಣೇಶ ದರ್ಶನಕ್ಕೆ ಜನಸಾಗರ ; ಡಿ.12ರವರೆಗೆ ವಿಶೇಷ ಪೂಜೆ

DSC_0487
Published on

ತುಮಕೂರು : ಇತಿಹಾಸ ಪ್ರಸಿದ್ಧ ಗೂಳೂರಿನಲ್ಲಿ ಬಲಿಪಾಡ್ಯಮಿಯಂದು ಗಣೇಶ ಮೂರ್ತಿಗೆ ಕಣ್ಣುಧಾರಣೆ ಮಾಡಲಾಗಿದ್ದು, ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಡಿ.12ವರೆಗೆ ನಿತ್ಯ ವಿಶೇಷ ಪೂಜೆ ನಡೆಯಲಿದೆ. ಡಿ.12ರ ಸಂಜೆ ವಿಸರ್ಜನೆ ಮಾಡಲಾಗುವುದು. ಕಾರ್ತೀಕ ಮಾಸದ ಬಲಿಪಾಡ್ಯಮಿ ದಿನ ಬೆಳಗ್ಗೆ ಪ್ರಥಮ ಪೂಜೆ ಆರಂಭಿಸಲಾಗಿದೆ. ತಿಂಗಳಿಗೂ ಹೆಚ್ಚು ಕಾಲ ನಡೆಯುವ ಗಣೇಶೋತ್ಸವಕ್ಕೆ ನಾಡಿನೆಲ್ಲೆಡೆಯಿಂದ ಭಕ್ತರು ಬರಲಿದ್ದು ಸೂಕ್ತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಮಹಾಗಣಪತಿ ಭಕ್ತಮಂಡಳಿ ಅಧ್ಯಕ್ಷ ಜಿ.ಎಸ್.ಶಿವಕುಮಾರ್ ತಿಳಿಸಿದರು.

ಪ್ರತಿದಿನ ರಾತ್ರಿ 9ಕ್ಕೆ ಮಹಾಮಂಗಳಾರತಿ ನಡೆಯಲಿದ್ದು, 18 ಕೋಮಿನವರು ಗಣಪನಿಗೆ ವಿವಿಧ ಸೇವೆ ಸಲ್ಲಿಸಲಿದ್ದಾರೆ.

ಡಿ.11ರಂದು ರಾತ್ರಿ ಗ್ರಾಮದ 18 ಕೋಮಿನ ಜನರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಗಣೇಶನ ಮೆರವಣಿಗೆ ನಡೆಸುತ್ತಾರೆ. ಡಿ.12 ರಂದು ಸಂಜೆ 5 ಗಂಟೆಯ ನಂತರ ಗೂಳೂರು ಕೆರೆಯಲ್ಲಿ ವಿಸರ್ಜಿಸಲಾಗುತ್ತಿದೆ.

ಗಣೇಶ ಚೌತಿಗೆ ಮಣ್ಣು ಒಗ್ಗೂಡಿಕೆ : ಊರಿನ ಜನ 101 ಉಂಡೆ ಮಣ್ಣು ತಂದು ಹಾಕುವುದರೊಂದಿಗೆ ತಿಂಗಳ ಕಾಲ ವಿನಾಯಕನ ಸುಂದರ ಮೂರ್ತಿ ತಯಾರಿಕೆ ಆರಂಭವಾಗಲಿದೆ. ಮೂರ್ತಿ ತಯಾರಕರಾದ ಗುರುಮೂರ್ತಿ ಹಾಗೂ ತಂಡದ ಕೈಯಲ್ಲಿ ಅರಳುವ 10 ಅಡಿ ಎತ್ತರ, 5 ಅಡಿ ಅಗಲವಿರುವ ವ್ನಿೇಶ್ವರನು ಕಾರ್ತಿಕ ಮಾಸದ ಬಲಿಪಾಡ್ಯಮಿಗೆ ಸರ್ವಾಲಂಕಾರ ಭೂಷಿತನಾಗಿ ಭಕ್ತರ ದರ್ಶನಕ್ಕೆ ಅಣಿಯಾಗುತ್ತಾನೆ.

ಪ್ರತಿದಿನ ಬೆಳಗ್ಗೆ 5.30 ರಿಂದ ರಾತ್ರಿ 12.30ರವರೆಗೆ ಗಣಪತಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ತುಮಕೂರಿನಿಂದ ಗೂಳೂರಿಗೆ ವಿಶೇಷ ಬಸ್ ಸೌಲಭ್ಯ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net