

ನರಗುಂದ: ಪಟ್ಟಣದ ಹೆಸ್ಕಾಂ ಆವರಣದಲ್ಲಿರುವ ಶ್ರೀ ಗಣಪತಿ ದೇವಸ್ಥಾನದ 27ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ, ವಿವಿಧ ಧಾರ್ಮಿಕ ಕಾರ್ಯಕ್ರಮ ಇತ್ತೀಚೆಗೆ ಶಾಸ್ತ್ರೋಕ್ತವಾಗಿ ನೆರವೇರಿದವು. ಹೆಸ್ಕಾಂ ಪ್ರಾಥಮಿಕ ಸಮಿತಿ ಅಧ್ಯಕ್ಷ ಉಮೇಶ ಇಸರಡ್ಡಿ, ಕಾರ್ಯದರ್ಶಿ ಮಂಜುನಾಥ ಚಂದನ್ನವರ, ಮಾರೇಶ ವಿ.ಎಂ., ಶರಣಪ್ಪ ಕುರುವಿನಶೆಟ್ಟಿ, ಂಗಪ್ಪ ಉಪ್ಪಾರ, ಎಚ್.ಎಂ. ಖುದಾವಂದ, ಶ್ರೀಶೈಲ ಅಂಗಡಿ, ಮಂಜುನಾಥ ಮುನೇನಕೊಪ್ಪ, ನರಗುಂದ ಹೆಸ್ಕಾಂ ವಿಭಾಗದ ವಿವಿಧ ಅಧಿಕಾರಿ, ಸಿಬ್ಬಂದಿ ಇದ್ದರು.