ಗಣಪತಿ ಮೆರವಣಿಗೆಯಲ್ಲಿ ಡಿಜೆಗಿಲ್ಲ ಪರವಾನಗಿ

KB vasukumar DJ Ban
ಕೆ.ಬಿ.ವಾಸುಕುಮಾರ್
Published on

ಕಂಪ್ಲಿ: ಗಣಪತಿ ಮೆರವಣಿಗೆಯಲ್ಲಿ ಡಿಜೆ ಬಳಕೆ ನಿಷೇಧವಿದ್ದು, ಯಾರು ಬಳಸಬಾರದು ಎಂದು ಪೂರ್ವಭಾವಿ ಸಭೆಯಲ್ಲಿ ಪಿಐ ಕೆ.ಬಿ.ವಾಸುಕುಮಾರ್ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಹಮ್ಮಿಕೊಂಡಿದ್ದ ಗಣೇಶ ಚತುರ್ಥಿ ಹಾಗೂ ಈದ್‌ಮಿಲಾದ್ ಹಬ್ಬ ಆಚರಣೆ ಪೂರ್ವಭಾವಿ ಸಭೆಯಲ್ಲಿ ಸೋಮವಾರ ಮಾತನಾಡಿದರು.

ಏಳನೇ ದಿನಕ್ಕೆ ಗಣಪತಿಗಳನ್ನು ವಿಸರ್ಜಿಸಬೇಕು. ಗಣಪತಿ ಮಂಡಳಿಯವರು ದಿನದ 24 ಗಂಟೆ ಜಾಗೂರುಕತೆಯಿಂದ ಕಾಯಬೇಕು. ಏನಾದರೂ ಅವಘಡಗಳು ಸಂಭವಿಸಿದಲ್ಲಿ ಮಂಡಳಿಯವರೇ ಜವಾಬ್ದಾರರು. ಗಣಪತಿ ವಿಸರ್ಜನೆ ದಿನ ಮಾತ್ರ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು.

ಸಾರ್ವಜನಿಕ ಗಣಪತಿ ಸ್ಥಾಪನೆಗೆ ಪುರಸಭೆ, ಗ್ರಾಪಂಗಳಿಂದ ಅನುಮತಿ ಪಡೆಯಬೇಕು. ವಿದ್ಯುತ್ ಬಳಕೆಗೆ ಜೆಸ್ಕಾಂನಿಂದ ಅನುಮತಿ ಪಡೆಯತಕ್ಕದ್ದು. ಈದ್‌ಮಿಲಾದ್ ಹಬ್ಬದ ಮೆರವಣಿಗೆ ಉದ್ದ ಕಡಿಮೆಗೊಳಿಸಬೇಕು. ಸಾಮರಸ್ಯದಿಂದ ಹಬ್ಬಗಳನ್ನು ಆಚರಿಸಬೇಕು ಎಂದು ಸಲಹೆ ನೀಡಿದರು.

ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಪ್ರಕಾಶ್‌ಬಾಬು, ಜೆಸ್ಕಾಂ ಸಿಬ್ಬಂದಿ ಗಿರಿಯಪ್ಪ, ಪ್ರಮುಖರಾದ ಕೆ.ಎಂ.ಹೇಮಯ್ಯಸ್ವಾಮಿ, ಪಿ.ಬ್ರಹ್ಮಯ್ಯ, ಸಿ.ಆರ್.ಹನುಮಂತ, ಬಿ.ಜಾಫರ್, ಎಸ್.ಎಂ.ನಾಗರಾಜ, ಅಯ್ಯೋದಿ ವೆಂಕಟೇಶ್, ಬಿ.ಸಿದ್ದಪ್ಪ, ಲಡ್ಡುಹೊನ್ನೂರ್‌ವಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net