ಗಣಪತಿ ಮೂರ್ತಿ ವಿಸರ್ಜನೆ ಅದ್ದೂರಿ

12 HKR 1
Published on

ಹಿರೇಕೆರೂರ: ಪಟ್ಟಣದ ಸರ್ವಜ್ಞ ವೃತ್ತದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳದ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣಪತಿ ವಿಗ್ರಹವನ್ನು ಗುರುವಾರ ಅದ್ದೂರಿ ಮೆರವಣಿಗೆ ಮೂಲಕ ಮಾಸೂರು ರಸ್ತೆಯ ಊರ ಹೊರವಲಯದಲ್ಲಿನ ಕುಬಸದ ಕಟ್ಟೆ ಕೆರೆಯಲ್ಲಿ ವಿಸರ್ಜಿಸಲಾಯಿತು.

ಸಂಜೆ 4 ಗಂಟೆಗೆ ಮಾಜಿ ಸಚಿವ ಬಿ.ಸಿ. ಪಾಟೀಲ ಗಣೇಶ ವಿಸರ್ಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಎರಡು ಡಿಜೆ ಸೌಂಡ್ ಸಿಸ್ಟಮ್ ವಾದ್ಯ ಮತ್ತು ಗೊಂಬೆಗಳ ಪ್ರದರ್ಶನದೊಂದಿಗೆ ಆರಂಭಗೊಂಡ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು.

ಮೆರವಣಿಗೆಯಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ಎರಡು ಪ್ರತ್ಯೇಕ ಡಿಜೆ ಸೌಂಡ್ ಸಿಸ್ಟಮ್ ವ್ಯವಸ್ಥೆ ಮಾಡಲಾಗಿತ್ತು. ಮೊದಲ ಬಾರಿಗೆ ಗಣೇಶನ ವಿಸರ್ಜನೆ ಮೆರವಣಿಗೆಯಲ್ಲಿ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ವಿವಿಧ ಗೀತೆಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದರು. ದಾರಿಯುದ್ದಕ್ಕೂ ರಾಮ, ಗಣೇಶನ ಜೈ ಘೊಷ ಮೊಳಗಿದವು.

ಜಿಲ್ಲಾ ಬಜರಂಗದಳ ಸಂಚಾಲಕ ಅನಿಲ್ ಹಲವಾಗಿಲ, ವಿನಾಯಕ ಕರ್ನಲ್, ಸಂತೋಷ ಬೆಳಗುತ್ತಿ, ಬಸವರಾಜ ಬೆಳಗುತ್ತಿ, ರಾಕೇಶ ತಂಬಾಕದ, ನಿಖಿಲಗೌಡ ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ರವಿಶಂಕರ ಬಾಳಿಕಾಯಿ, ಪುಟ್ಟಣ್ಣ ಪಾಟೀಲ, ಮಾಲತೇಶ ಶಿಂಧೆ, ರಾಜು ಕರಡಿ, ವೀರಣ್ಣ ಚಿಟ್ಟೂರ, ಮಲ್ಲಿಕಾರ್ಜುನ ಹಳಕಟ್ಟಿ, ರಾಘು ಭಟ್, ಜಗದೀಶ ದೊಡ್ಡಗೌಡ್ರ ಹಾಗೂ ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net