ಬಾಳೂರಿನಲ್ಲಿ ಗಣಪತಿ ವಿಸರ್ಜನೆ

bnk ganapa
ಬಾಳೂರು ದರ್ಬಾರ್ ಪೇಟೆ ಶ್ರೀ ವಿದ್ಯಾಗಣಪತಿ ವಿಸರ್ಜಾನಾ ಮೆರವಣಿಗೆ ನಡೆಯಿತು.
Published on

ಬಣಕಲ್: ಬಾಳೂರು ದರ್ಬಾರ್ ಪೇಟೆ ಶ್ರೀ ವಿದ್ಯಾಗಣಪತಿ ಹಾಗೂ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ ಗಣಪತಿ ವಿಸರ್ಜನಾ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

ವಿವಿಧ ಪುಷ್ಪ, ವಿದ್ಯುತ್ ದೀಪಾಲಂಕಾರಗಳಿಂದ ಸಿಂಗಾರಗೊಂಡ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಭಜನಾ ತಂಡ, ದುರ್ಗಾ ಪರಮೇಶ್ವರಿ ಸ್ತಬ್ಧಚಿತ್ರ, ಹುಲಿ ಕುಣಿತ, ತಾಲೀಮು, ನಾಸಿಕ್, ಡಿಜೆ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಬಾಳೂರು ಸುತ್ತಮುತ್ತಲಿನ ಭಕ್ತರು ದೇವರಿಗೆ ಹಣ್ಣುಕಾಯಿ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ಬಾಳೂರಿನ ಶ್ರೀ ವಿದ್ಯಾಗಣಪತಿ ಮಂದಿರದಿಂದ ಹೊರಟ ವಿಸರ್ಜನಾ ಮೆರವಣಿಗೆ ಬಾಳೂರು ಹ್ಯಾಂಡ್‌ಪೋಸ್ಟ್ ಮೂಲಕ ಹೇಮಾವತಿ ನದಿಗೆ ಸಾಗಿ ಗಣಪತಿ ವಿಸರ್ಜನೆ ಮಾಡಲಾಯಿತು.7 ದಿನಗಳ ಕಾಲ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದ್ದು ವಿವಿಧ ಪೂಜಾ ವಿಧಿವಿಧಾನಗಳು ವಿಜೃಂಭಣೆಯಿಂದ ನಡೆಯಿತು. ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net