ಅಪಘಾತದಲ್ಲಿ ದೇವಸ್ಥಾನದ ಧರ್ಮದರ್ಶಿ ಗಣಪತಿ ಭಟ್ ಸಾವು

GAJENDRAGADA
ಗಜೇಂದ್ರಗಡ ಸಮೀಪದ ರಾಜೂರು ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ನಜ್ಜುಗುಜ್ಜಾದ ಕಾರು.
Published on

ಗಜೇಂದ್ರಗಡ: ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ ಪರಿಣಾಮ ಸೂಡಿ ಗ್ರಾಮದ ಮಹಾಗಣಪತಿ ದೇವಸ್ಥಾನದ ಧರ್ಮದರ್ಶಿ, ಖ್ಯಾತ ಪಂಚಾಂಗಕರ್ತ ಗಣಪತಿ ಭಟ್ (70) ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ತಡರಾತ್ರಿ 2.15 ರ ಸುಮಾರಿಗೆ ಗಜೇಂದ್ರಗಡ ಪಟ್ಟಣದ ರಾಜೂರು ಸಮೀಪ ಸಂಭವಿಸಿದೆ.

ಘಟನೆಯಲ್ಲಿ ಗಣಪತಿ ಭಟ್ ಅವರ ಪುತ್ರ ಕಿರಣ ಜೋಶಿ ಹಾಗೂ ಸೊಸೆ ವೈಷ್ಣವಿ ಜೋಶಿ ಅವರಿಗೆ ಗಂಭೀರ ಗಾಯವಾಗಿದ್ದು ಗಾಯಗೊಂಡವರನ್ನು ಗದಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಬಂಧಿಕರ ಮದುವೆ ಕಾರ್ಯ ಮುಗಿಸಿಕೊಂಡು ಲಿಂಗಸುಗೂರಿನಿಂದ ಸೂಡಿ ಗ್ರಾಮಕ್ಕೆ ವಾಪಸಾಗುತ್ತಿದ್ದಾಗ ರಾಜೂರು ಗ್ರಾಮದ ಹಾಲಿನ ಕೇಂದ್ರದ ಮುಂದೆ ದುರ್ಘಟನೆ ನಡೆದಿದೆ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net