

ಧಾರವಾಡ: ನಗರದಲ್ಲಿ ಮಂಗಳವಾರ ಗಣಪತಿ ಬಪ್ಪಾ ಮೋರೆಯ ಸದ್ದು ಮೊಳಗಿತು. ಸಾರ್ವಜನಿಕರು ಗಣೇಶನನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿ ಸಂಭ್ರಮಿಸಿದರು. ಸಾರ್ವಜನಿಕ ಗಜಾನನೋತ್ಸವ ಮಂಡಳಿಗಳ ಯುವ ಸಮೂಹ ಇಡೀ ದಿನ ಕುಣಿದು ಕುಪ್ಪಳಿಸುತ್ತ ಗಣೇಶನನ್ನು ಪ್ರತಿಷ್ಠಾಪಿಸಿದರು.
ಮನೆ ಮಂದಿಯೆಲ್ಲ ಹೊಸ ಬಟ್ಟೆಗಳನ್ನುಟ್ಟು ಮಾರುಕಟ್ಟೆಯಿಂದ ಗಣೇಶನ ಮೂರ್ತಿಗಳನ್ನು ಮನೆಗಳಿಗೆ ಒಯ್ದರು. ಮಕ್ಕಳ ಸಂಭ್ರಮ ದುಪ್ಪಟ್ಟಾಗಿತ್ತು. ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದ ಮಕ್ಕಳು, ಗಣಪತಿ ಬಪ್ಪಾ ಮೋರೆಯ ಎನ್ನುತ್ತ ಸಂಭ್ರಮಿಸಿದರು.
ಸಾರ್ವಜನಿಕ ಉತ್ಸವ ಮಂಡಳಿಗಳ ಗಣೇಶ ಪ್ರತಿಷ್ಠಾಪನೆ ವಿಭಿನ್ನವಾಗಿತ್ತು. ಟ್ರ‍್ಯಾಕ್ಟರ್‌ಗಳಲ್ಲಿ ಗಣೇಶನ ಬೃಹತ್ ಮೂರ್ತಿಗಳನ್ನಿಟ್ಟುಕೊಂಡಿದ್ದರೆ ಮುಂದೆ ಡಿಜೆಗಳ ಅಬ್ಬರ ಕಂಡುಬAತು. ದೊಡ್ಡ ಪತಾಕೆಗಳನ್ನು ತಿರುವುತ್ತಿದ್ದ ಯುವಕರ ಸಂಭ್ರಮ ಮಿತಿಮೀರಿತ್ತು. ಯುವಕರು, ಮಕ್ಕಳು ಡಿಜೆ ಹಾಡುಗಳಿಗೆ ಕುಣಿಯುತ್ತ ಸಾಗಿದರು.