

ಸಾಗರ: ಕಾಗೋಡು ಚಳವಳಿ ಮೂಲಕ ಗೇಣಿದಾರರ ಬದುಕಿಗೆ ಹೊಸ ಭಾಷ್ಯ ಬರೆದ ಹೆಗ್ಗಳಿಕೆ ಎಚ್.ಗಣಪತಿಯಪ್ಪ ಅವರಿಗೆ ಸಲ್ಲುತ್ತದೆ ಎಂದು ರೈತ ಸಂಘದ ಜಿ¯್ಲÁಧ್ಯಕ್ಷ ದಿನೇಶ್ ಶಿರವಾಳ ಹೇಳಿದರು.
ನಗರದ ರೈತ ಭವನದಲ್ಲಿ ಗುರುವಾರ ರೈತ ಸಂಘ(ಡಾ.ಎಚ್.ಗಣಪತಿಯಪ್ಪ ಸ್ಥಾಪಿತ) ಹಮ್ಮಿಕೊಂಡ ಡಾ. ಎಚ್.ಗಣಪತಿಯಪ್ಪ ಅವರ 99ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಗಣಪತಿಯಪ್ಪ ಅವರು ರೈತ ಸಂಘವನ್ನು ಕಟ್ಟಿ ಬಲಾಢÀ್ಯ ಜಮೀನುದಾರರ ವಿರುದ್ಧ ಹೋರಾಟ ನಡೆಸಿ ಮುಖ್ಯಮಂತ್ರಿಯಾಗಿದ್ದ ದೇವರಾಜು ಅರಸು ಕಾಲದಲ್ಲಿ ಗೇಣಿ ಕಾಯ್ದೆ ರದ್ದುಗೊಳಿಸಿದರು. ಸಹಸ್ರಾರು ಗೇಣಿದಾರರು ಉಳುವ ಭೂಮಿಯ ಒಡೆಯರನ್ನಾಗಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಅವರ ಹೋರಾಟದ ಬದುಕನ್ನು ಯುವ ಸಮೂಹ ಅರ್ಥ ಮಾಡಿಕೊಳ್ಳಬೇಕು. ಸಮ ಸಮಾಜದ ನಿರ್ಮಾಣಕ್ಕೆ ಅವರ ಕೊಡುಗೆ ದೊಡ್ಡದು ಎಂದರು.
ಸಂಘದ ಜಿ¯್ಲÁ ಉಪಾಧ್ಯಕ್ಷ ರಮೇಶ್ ಕೆಳದಿ ಮಾತನಾಡಿ, ಗಣಪತಿಯಪ್ಪ ಅವರ ಹೋರಾಟ ಇಂದಿಗೂ ಎಲ್ಲರ ಮನಸ್ಸಿನಲ್ಲಿ ಮಾಸದೆ ಉಳಿದಿದೆ. ಕಾಗೋಡು ಸತ್ಯಾಗ್ರಹವನ್ನು ಕೊನೆಯವರೆಗೂ ತೆಗೆದುಕೊಂಡು ಹೋಗಿ, ಭೂ ಮಾಲೀಕರ ಆಸೆ ಆಮಿಷಗಳಿಗೆ ಒಳಗಾಗದೆ ಸೈದ್ಧಾಂತಿಕವಾಗಿ ಹೋರಾಟದಲ್ಲಿ ಯಶಸ್ಸು ಕಂಡ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಗಣಪತಿಯಪ್ಪ ಅವರ ಹೋರಾಟದಿಂದಾಗಿ ಲಕ್ಷಾಂತರ ಗೇಣಿ ಕುಟುಂಬ ಇಂದು ನೆಮ್ಮದಿಯಿಂದ ಬದುಕು ನಡೆಸುತ್ತಿದೆ. ಆದರೆ ಅವರು ನಡೆಸಿದ ಚಳವಳಿ ಮತ್ತು ಮೂಲ ಆಶಯದ ಮಹತ್ವ ಯುವ ಪೀಳಿಗೆಗೆ ತಲುಪಿಸುವಲ್ಲಿ ನಾವು ಹಿಂದಾಗಿದ್ದೇವೆ ಎಂದು ಹೇಳಿದರು.
ಸಂಘದ ತಾಲೂಕು ಅಧ್ಯಕ್ಷ ಡಾ. ರಾಮಚಂದ್ರಪ್ಪ ಮನೆಘಟ್ಟ, ಉಪಾಧ್ಯಕ್ಷ ಕುಮಾರ ಗೌಡ, ಪ್ರಧಾನ ಕಾರ್ಯದರ್ಶಿ ಹೊಯ್ಸಳ ಗಣಪತಿಯಪ್ಪ, ಚಂದ್ರಪ್ಪ ಆಲಳ್ಳಿ, ಕಿರಣ್ ಕುಮಾರ್ ವಡ್ನಾಲ ಇತರರಿದ್ದರು.