

ಮಂಗಳೂರು: ಮುಂಬೈ ಲೋಕಮಾನ್ಯ ತಿಲಕ್ ಮತ್ತು ಮಂಗಳೂರು ಜಂಕ್ಷನ್ ನಡುವೆ ವಾರಕ್ಕೊಮ್ಮೆ ಹೊಸ ಗಣಪತಿ ಸ್ಪೆಷಲ್ ಎಸಿ ರೈಲು (ನಂ. 01165/ 01166) ಆಗೊಸ್ಟ್ 16, 23, 30 ಮತ್ತು ಸೆಪ್ಟಂಬರ್ 6 ರಂದು ಸಂಚರಿಸಲಿದೆ.
ಈ ರೈಲಿನ ಎಲ್ಲ ಬೋಗಿಗಳು ಹವಾನಿಯಂತ್ರಿತ (ಎಸಿ)ವಾಗಿದ್ದು, ಪ್ರಯಾಣ ಟಿಕೆಟ್ ದರ 1.3 ಪಟ್ಟು ಅಧಿಕ ಇರುತ್ತದೆ.
ಮುಂಬೈ ಲೋಕಮಾನ್ಯ ತಿಲಕ್ ನಿಲ್ದಾಣದಿಂದ ರಾತ್ರಿ 12.45 ಕ್ಕೆ ಹೊರಡುವ ರೈಲು ಕರಾವಳಿಯ ಕೆಲವು ಪ್ರಮುಖ ನಿಲ್ದಾಣಗಳಿಗೆ ತಲುಪುವ ಸಮಯ ಹೀಗಿದೆ: ಮರುದಿನ ಮಧ್ಯಾಹ್ನ 02.02- ಕಾರವಾರ, 02.22- ಅಂಕೋಲ, 2.32- ಗೋಕರ್ಣ, 02.52- ಕುಮಟ, 03.05- ಹೊನ್ನಾವರ, 03.20- ಮುರ್ಡೇಶ್ವರ, 3.38- ಭಟ್ಕಳ, 03.56- ಮೂಕಾಂಬಿಕಾ ರೋಡ್ ಬೈಂದೂರು, ಸಾಯಂಕಾಲ 04.26- ಕುಂದಾಪುರ, 04.50- ಉಡುಪಿ, 06.00- ಮೂಲ್ಕಿ, 06.30- ಸುರತ್ಕಲ್, 06.55- ತೋಕೂರು, ರಾತ್ರಿ 7.30 ಮಂಗಳೂರು ಜಂಕ್ಷನ್.
ಮಂಗಳೂರು ಜಂಕ್ಷನ್‌ನಿಂದ ರಾತ್ರಿ 10.20 ಕ್ಕೆ ಪ್ರಯಾಣ ಆರಂಭಿಸುವ ರೈಲು ಕರಾವಳಿಯ ಕೆಲವು ಪ್ರಮುಖ ನಿಲ್ದಾಣಗಳಿಗೆ ತಲುಪುವ ಸಮಯ ಹೀಗಿದೆ: 11.05- ತೋಕೂರು, 11.14- ಸುರತ್ಕಲ್, 11.26- ಮೂಲ್ಕಿ, 11.56- ಉಡುಪಿ, ಮಧ್ಯರಾತ್ರಿ 12.22- ಕುಂದಾಪುರ, 12.50- ಮೂಕಾಂಬಿಕಾ ರೋಡ್ ಬೈಂದೂರು, 01.10- ಭಟ್ಕಳ, 01.30- ಮುರ್ಡೇಶ್ವರ, 01.48- ಹೊನ್ನಾವರ, 02.00- ಕುಮಟ, 2.20- ಗೋಕರ್ಣ, 02.30- ಅಂಕೋಲ, 02.50- ಕಾರವಾರ, ಮರುದಿನ ಸಾಯಂಕಾಲ 06.30 ಕ್ಕೆ ಲೋಕಮಾನ್ಯ ತಿಲಕ್ ತಲುಪುವುದು.
ವಾರದ ಹಿಂದೆಯಷ್ಟೇ ಕೊಂಕಣ ರೈಲ್ವೆಯು ಲೋಕಮಾನ್ಯ ತಿಲಕ್ (ಟಿ)- ತೋಕೂರು ಗಣಪತಿ ಸ್ಪೆಷಲ್ (01153/ 01154) ರೈಲು ಪ್ರಕಟಿಸಿದೆ. ಈ ರೈಲು ಆ.13 ರಿಂದ ಸೆಪ್ಟಂಬರ್ 11 ತನಕ ವಾರದ ಎಲ್ಲ ದಿನ ಸಂಚರಿಸಲಿದೆ. ಈ ರೈಲನ್ನು ಕೂಡ ಮಂಗಳೂರು ಸೆಂಟ್ರಲ್ ತನಕ ವಿಸ್ತರಿಸಬೇಕು ಎಂದು ಪಶ್ಚಿಮ ಕರಾವಳಿ ರೈಲ್ವೆ ಅಭಿವೃದ್ಧಿ ಸಮಿತಿ ಒತ್ತಾಯಿಸಿದೆ.