

ಹೊನ್ನಾವರ: ತಾಲೂಕಿನ ಬಳ್ಕೂರ ಗ್ರಾಮದ ಗಣಪತಿ ನಾಯ್ಕ ಬಿ.ಟಿ. ಅವರು ಬಿಎಸ್ಸೆನ್ನೆಲ್ ಸಲಹಾ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ ಮೇರೆಗೆ ನೇಮಕ ಮಾಡಲಾಗಿದೆ. ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿರುವ ಗಣಪತಿ ನಾಯ್ಕ, ಪಕ್ಷದ ತಾಲೂಕು ಹಾಗೂ ಜಿಲ್ಲೆಯ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ಪ್ರಸುತ್ತ ಬಳ್ಕೂರ ಗ್ರಾಪಂ ಸದಸ್ಯರಾಗಿ, ಬಿಜೆಪಿ ಫಲಾನುಭವಿ ಜಿಲ್ಲಾ ಪ್ರಕೋಷ್ಠದ ಸಂಚಾಲಕರಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.